ಹೊಟ್ಟೆಪಾಡಿಗೆ ಚಹಾ ಮಾರುತ್ತಿರುವ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಹರೀಶ್ ಕುಮಾರ್

Update: 2018-09-07 09:06 GMT
ಫೋಟೊ ಕೃಪೆ: aninews.in

ಹೊಸದಿಲ್ಲಿ, ಸೆ.7: ಇಂಡೋನೇಷ್ಯಾದ ಜಕಾರ್ತ ಏಷ್ಯನ್ ಗೇಮ್ಸ್ 2018ರಲ್ಲಿ ಕಂಚು ಗೆದ್ದ ಭಾರತದ ‘ಸೇಪಕ್ ತಕ್ರಾವ್’ ತಂಡದಲ್ಲಿದ್ದ ಹರೀಶ್ ಕುಮಾರ್ ಹೊಟ್ಟೆ ಪಾಡಿಗಾಗಿ ತಮ್ಮ ತಂದೆ ದಿಲ್ಲಿಯಲ್ಲಿ ನಡೆಸುತ್ತಿರುವ ಟೀ ಸ್ಟಾಲ್ ನಲ್ಲಿ ಅವರಿಗೆ ಸಹಾಯ ಮಾಡುತ್ತಾರೆ.

``ನಮ್ಮ ಕುಟುಂಬದಲ್ಲಿ ಹಲವು ಸದಸ್ಯರಿದ್ದು ಆದಾಯ ಮಾತ್ರ ಅಲ್ಪವಾಗಿದೆ. ಕುಟುಂಬವನ್ನು ಸಲಹಲು ಟೀ ಅಂಗಡಿಯಲ್ಲಿ  ತಂದೆಗೆ ಸಹಾಯ ಮಾಡುತ್ತೇನೆ. ಪ್ರತಿ ದಿನ  2 ಗಂಟೆಯಿಂದ 6 ಗಂಟೆ ತನಕ ಅಭ್ಯಾಸ ಮಾಡುತ್ತೇನೆ. ಮುಂದೆ ನನಗೊಂದು ಉತ್ತಮ ಉದ್ಯೋಗ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದೇನೆ,'' ಎಂದು ಹರೀಶ್ ಕುಮಾರ್ ಹೇಳುತ್ತಾರೆ.

ಸೇಪಕ್ ತಕ್ರಾವ್ ಆಟವನ್ನು ಅವರು 2011ರಲ್ಲಿ ತಮ್ಮ ಕೋಚ್ ಹೇಮರಾಜ್ ಸಹಾಯದಿಂದ ಆಡಲು ಆರಂಭಿಸಿದ್ದರು. ``ನಾನು ಟಯರ್ ಜತೆ ಆಟವಾಡುವುದನ್ನು ನೋಡಿದ ನನ್ನ ಕೋಚ್ ನನ್ನನ್ನು ಭಾರತದ ಕ್ರೀಡಾ ಪ್ರಾಧಿಕಾರಕ್ಕೆ ಪರಿಚಯಿಸಿದ್ದರು. ನಂತರ ನನಗೆ ಮಾಸಿಕ ಸಹಾಯಧನ ಮತ್ತು ಸ್ಪೋರ್ಟ್ಸ್ ಕಿಟ್ ದೊರಕಿತ್ತು,'' ಎಂದು ಹರೀಶ್ ವಿವರಿಸುತ್ತಾರೆ.

ಹರೀಶ್ ಅವರ ತಂದೆ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದಾರೆ. ಈಗ ಅವರ ಕುಟುಂಬ ಹರೀಶ್ ಅವರ ಕ್ರೀಡಾ ಪ್ರತಿಭೆಯನ್ನು ಗಮನಿಸಿ ಸರಕಾರ ಅವರಿಗೆ ಉತ್ತಮ ಉದ್ಯೋಗ ಒದಗಿಸುವುದೆಂಬ ಭರವಸೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News