ಶೌಚಾಲಯ ಸಮಸ್ಯೆ

Update: 2018-09-07 18:41 GMT

ಮಾನ್ಯರೇ,

2014ರಲ್ಲಿ ಕೇಂದ್ರ ಸರಕಾರ ಜಾರಿ ಮಾಡಿದ ‘ಸ್ವಚ್ಛ ಭಾರತ’ ಯೋಜನೆಯ ಬಹುಮುಖ್ಯ ಉದ್ದೇಶ, ದೇಶದಲ್ಲಿರುವ ಪ್ರತಿಯೊಂದು ಮನೆಯು ಶೌಚಾಲಯ ಹೊಂದಬೇಕು ಎಂಬುದು. ಅದರೆ ರಾಮನಗರ ಜಿಲ್ಲೆಗೆ ಸೇರಿದ ಮರಳವಾಡಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳನ್ನು ನೋಡಿದರೆ ಶೇ.25ರಷ್ಟು ಭಾಗಗಳಲ್ಲಿ ಕೂಡ ಶೌಚಾಲಯಗಳು ನಿರ್ಮಾಣವಾಗಿಲ್ಲವೆಂದು ಬೇಸರಪಡಬೇಕಾಗಿದೆ. ಇಲ್ಲಿನ ಸ್ಥಳೀಯ ಗುತ್ತಿಗೆದಾರರಿಗೆ ಶೌಚಗೃಹಗಳನ್ನು ನಿರ್ಮಿಸುವ ಕೆಲಸವನ್ನು ವಹಿಸಲಾಗಿದೆ. ಆದರೆ ಇವರು ಯಾವುದೇ ಕೆಲಸವನ್ನು ಪೂರ್ತಿಯಾಗಿ ಮಾಡಿಲ್ಲ. ಅಲ್ಲದೆ ಕಳಪೆ ಗುಣಮಟ್ಟದ ವಸ್ತುಗಳನ್ನು ಕಟ್ಟಡಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಶೌಚಾಲಯಗಳ ಕಟ್ಟಡ ನಿರ್ಮಾಣದ ಕೆಲಸವನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದ್ದರೂ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳ ನಿಷ್ಕ್ರಿಯತೆಯೇ ಇದಕ್ಕೆ ಕಾರಣ. ಇನ್ನಾದರೂ ಸಂಬಂಧಿತರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೌಚಾಲಯ ಸಮಸ್ಯೆಗೆ ಮುಕ್ತಿ ಕೊಡಬೇಕಾಗಿದೆ.

Writer - -ಕಾವೇರಿದಾಸ್, ಲಿಂಗನಾಪುರ

contributor

Editor - -ಕಾವೇರಿದಾಸ್, ಲಿಂಗನಾಪುರ

contributor

Similar News