ಸಮಸ್ಯೆಗಳ ಬಗ್ಗೆ ಬಿಜೆಪಿ ಗಾಢ ಮೌನ: ಕಾಂಗ್ರೆಸ್

Update: 2018-09-09 17:16 GMT

ಹೊಸದಿಲ್ಲಿ, ಸೆ. 9: ರೂಪಾಯಿ ಮೌಲ್ಯ ಕುಸಿತ, ತೈಲ ಬೆಲೆ ಏರಿಕೆ, ರಫೇಲ್ ಕುರಿತು ಗಾಢ ಮೌನಕ್ಕೆ ಮೊರೆ ಹೋಗಿರುವ ಬಿಜೆಪಿಯನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಬಿಜೆಪಿ ಸುಳ್ಳಿನ ಪಕ್ಷ ಎಂದು ಎಂದು ಪ್ರತಿಪಾದಿಸಿದೆ.

ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಬಿಜೆಪಿ ಉದ್ದೇಶ ‘‘ಬ್ರೇಕ್ (ತುಂಡರಿಸು), ಜಾಮ್ (ಇರುಕಿಸು) ಹಾಗೂ ಪೆರಿಶ್ (ನಾಶ ಮಾಡು)’’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

ಬಿಜೆಪಿ ಅಂದರೆ ಬ್ರೇಕ್ (ಮುರಿ), ಜಾಮ್ (ಇರುಕಿಸು), ಪೆರಿಶ್ (ನಾಶ ಮಾಡು). ಬಿಜೆಪಿ ಸೂಕ್ಷ, ಸಣ್ಣ ಹಾಗೂ ಮದ್ಯಮ ಉದ್ಯಮ, ಅಂಗಡಿ ಮಾಲಕರ ಬೆನ್ನೆಲುಬನ್ನು ಜಿಎಸ್‌ಟಿ ಮೂಲಕ ಮುರಿದಿದೆ, ನಗದು ನಿಷೇಧದ ಮೂಲಕ ಆರ್ಥಿಕತೆಯನ್ನು ಇರುಕಿಸಿದೆ, ಯುವಕರ ಭವಿಷ್ಯ ಹಾಗೂ ರೈತರನ್ನು ನಾಶಮಾಡಿದೆ ಎಂದು ಸುರ್ಜೇವಾಲ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದು 52 ತಿಂಗಳು ಆಯಿತು. ಅದರ ವಿಭಜನೆ, ವಂಚನೆ, ವೈರುಧ್ಯದ ಹೇಳಿಕೆ ಹಾಗೂ ಇಬ್ಬಗೆ ನೀತಿಯು ಭಾರತ ಮೂಲ ಮೌಲ್ಯಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಎಂದು ಸುರ್ಜೇವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News