ಶತ್ರುವನ್ನು ಹಿಮ್ಮೆಟ್ಟಿಸಲು ಬಲಿಷ್ಠರಾಗಿ: ಇರಾನ್ ಸಶಸ್ತ್ರ ಪಡೆಗಳಿಗೆ ಖಾಮಿನೈ ಕರೆ

Update: 2018-09-09 17:37 GMT

ದುಬೈ, ಸೆ. 9: ಶತ್ರುವನ್ನು ಹಿಮ್ಮೆಟ್ಟಿಸಲು ತನ್ನ ಶಕ್ತಿಯನ್ನು ವೃದ್ಧಿಸುವಂತೆ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ರವಿವಾರ ದೇಶದ ಸಶಸ್ತ್ರ ಪಡೆಗಳನ್ನು ಒತ್ತಾಯಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನೇ ದಿನೇ ಹೆಚ್ಚುತ್ತಿರುವಂತೆಯೇ ಅವರು ಹೇಳಿಕೆ ನೀಡಿದ್ದಾರೆ.

‘‘ನಿಮ್ಮ ಶಕ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಸಿ. ಯಾಕೆಂದರೆ ನಿಮ್ಮ ಶಕ್ತಿ ಶತ್ರುವನ್ನು ಹೆದರಿಸುತ್ತದೆ ಹಾಗೂ ಹಿಮ್ಮೆಟ್ಟುವಂತೆ ಮಾಡುತ್ತದೆ’’ ಎಂದು ಅವರು ಹೇಳಿದರು ಎಂದು ವೆಬ್‌ಸೈಟೊಂದು ವರದಿ ಮಾಡಿದೆ.

ಇರಾನ್‌ನ ಸಶಸ್ತ್ರ ಪಡೆಗಳ ಕ್ಯಾಡೆಟ್‌ಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News