ಆರಿಫ್ ಅಲ್ವಿ ಪಾಕ್ ಅಧ್ಯಕ್ಷರಾಗಿ ಪ್ರಮಾಣ

Update: 2018-09-09 17:39 GMT

ಇಸ್ಲಾಮಾಬಾದ್, ಸೆ. 9: ಪ್ರಧಾನಿ ಇಮ್ರಾನ್ ಖಾನ್‌ರ ನಿಕಟವರ್ತಿ ಆರಿಫ್ ಅಲ್ವಿ ರವಿವಾರ ಪಾಕಿಸ್ತಾನದ 13ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಲ್ಲಿನ ಐವನ್ ಇ ಸದರ್ (ಅಧ್ಯಕ್ಷರ ನಿವಾಸ)ದಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಸ್ಥಾಪಕ ಸದಸ್ಯರಲ್ಲಿ ಓರ್ವರಾಗಿರುವ 69 ವರ್ಷದ ದಂತವೈದ್ಯರಿಗೆ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್ ಪ್ರಮಾಣವಚನ ಬೋಧಿಸಿದರು.

ನಿರ್ಗಮನ ಅಧ್ಯಕ್ಷ ಮಮ್ನೂನ್ ಹುಸೈನ್‌ರ ಐದು ವರ್ಷಗಳ ಅಧಿಕಾರಾವಧಿ ಶನಿವಾರ ಮುಕ್ತಾಯಗೊಂಡಿದ್ದು, ಅವರು ಅಧ್ಯಕ್ಷರ ನಿವಾಸವನ್ನು ತೊರೆದರು.

ಪ್ರಧಾನಿ ಇಮ್ರಾನ್ ಖಾನ್, ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವ ಮತ್ತು ವಿದೇಶಿ ರಾಜತಾಂತ್ರಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News