ತಮ್ಮ ಮಕ್ಕಳೊಂದಿಗೆ ಸೇರಿಕೊಳ್ಳಲು ನಿರಾಕರಿಸುವ ವಲಸಿಗರು

Update: 2018-09-09 17:49 GMT

ವಾಶಿಂಗ್ಟನ್, ಸೆ. 9: ಟ್ರಂಪ್ ಆಡಳಿತದಿಂದಾಗಿ ತಮ್ಮ ಮಕ್ಕಳಿಂದ ಬೇರ್ಪಟ್ಟು ಸ್ವದೇಶಕ್ಕೆ ವಾಪಾಸಾಗಿರುವ ವಲಸಿಗ ಹೆತ್ತವರು ತಮ್ಮ ಮಕ್ಕಳೊಂದಿಗೆ ಸೇರಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್‌ನ ವಕೀಲರೊಬ್ಬರು ಶುಕ್ರವಾರ ನ್ಯಾಯಾಲಯವೊಂದಕ್ಕೆ ತಿಳಿಸಿದರು.

ತಮ್ಮ ದೇಶಗಳು ಅಪಾಯಕಾರಿಯಾಗಿರುವುದರಿಂದ ತಾವು ಮಕ್ಕಳನ್ನು ವಾಪಸ್ ಪಡೆದುಕೊಳ್ಳಲು ಬಯಸುವುದಿಲ್ಲ ಎಂಬ ಇಂಗಿತವನ್ನು ಹೆತ್ತವರು ವ್ಯಕ್ತಪಡಿಸಿದ್ದಾರೆ ಎಂದರು.

‘‘ಈ ವಾರ ನಾವು ಮಕ್ಕಳ ಹೆತ್ತವರೊಂದಿಗೆ ಅತ್ಯಂತ ಆತಂಕಕಾರಿ ಮಾತುಕತೆಗಳನ್ನು ನಡೆಸಿದೆವು. ತಮ್ಮ ಮಕ್ಕಳೊಂದಿಗೆ ಸೇರಿಕೊಳ್ಳಲು ಅವರು ಎಷ್ಟು ಉತ್ಸುಕರಾಗಿದ್ದಾರೋ, ಅದು ಅಷ್ಟೇ ಅಪಾಯಕಾರಿ ಎಂಬುದಾಗಿಯೂ ಅವರು ಭಾವಿಸುತ್ತಾರೆ. ಇದು ಕರುಣಾಜನಕವಾಗಿದೆ’’ ಎಂದು ವಕೀಲ ಲೀ ಗೆಲರಂಟ್ ಸ್ಯಾನ್‌ಡೀಗೊದ ಫೆಡರಲ್ ನ್ಯಾಯಾಧೀಶರ ಬಳಿ ನಿವೇದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News