ಭಾರತ ಸೆಮಿ ಫೈನಲ್‌ಗೆ

Update: 2018-09-09 18:55 GMT

ಢಾಕಾ, ಸೆ.9: ಮಾಲ್ಡೀವ್ಸ್ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿರುವ ಭಾರತದ ಫುಟ್ಬಾಲ್ ತಂಡ ಸ್ಯಾಫ್ ಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದೆ.

ಚೊಚ್ಚಲ ಅಂತರ್‌ರಾಷ್ಟ್ರೀಯ ಗೋಲು ಬಾರಿಸಿದ ಮುಂಬೈ ಕನ್ನಡಿಗ ನಿಖಿಲ್ ಪೂಜಾರಿ(36ನೇ ನಿಮಿಷ) ಹಾಗೂ ಪಂಜಾಬ್‌ನ ಮನ್ವೀರ್ ಸಿಂಗ್(45ನೇ ನಿ.) ಭಾರತ ತಂಡ ಮಾಲ್ಡೀವ್ಸ್ ತಂಡವನ್ನು ಸೋಲಿಸಲು ನೆರವಾದರು. ಈ ಗೆಲುವಿನೊಂದಿಗೆ ಆರು ಅಂಕ ಗಳಿಸಿದ ಭಾರತ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದೆ. ಭಾರತ ಬುಧವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ನಿಖಿಲ್ 11ನೇ ನಿಮಿಷದಲ್ಲೇ ಗೋಲು ಬಾರಿಸಲು ವಿಫಲ ಯತ್ನ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News