1995ರ ಭುವನ ಸುಂದರಿ ಚೆಲ್ಸಿ ಸ್ಮಿತ್ ವಿಧಿವಶ

Update: 2018-09-10 08:29 GMT

ನ್ಯೂಯಾರ್ಕ್ , ಸೆ.10: ಇಪ್ಪತ್ತಮೂರು ವರ್ಷಗಳ ಹಿಂದೆ  ಭುವನ ಸುಂದರಿ ಕಿರೀಟ ಧರಿಸಿದ್ದ ಚೆಲ್ಸಿ ಸ್ಮಿತ್ ಶನಿವಾರ ನಿಧನರಾದರು.  ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚೆಲ್ಸ್ ಸ್ಮಿತ್  ಅವರಿಗೆ 45 ವರ್ಷ ವಯಸ್ಸಾಗಿತ್ತು.

1995ರಲ್ಲಿ ಅಮೆರಿಕಾವನ್ನು ಪ್ರತಿನಿಧಿಸಿದ್ದ ಚೆಲ್ಸಿ ಭುವನ ಸುಂದರಿ ಕಿರೀಟ ಧರಿಸಿದ್ದರು. 1994ರ ಭುವನ ಸುಂದರಿ ಭಾರತದ ಸುಷ್ಮಿತಾ ಸೇನ್ ಅವರು ಚೆಲ್ಸಿಗೆ ಭುವನಸುಂದರಿ ಕಿರೀಟ ತೊಡಿಸಿದ್ದರು.  ಚೆಲ್ಸಿ ಸ್ಮಿತ್ ಟಿವಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News