ಸಾರ್ವಜನಿಕ ಸಮಸ್ಯೆಗಳನ್ನೆತ್ತುವಲ್ಲಿ ಪ್ರತಿಪಕ್ಷಗಳ ಬಲ ನೋಡಬಯಸುತ್ತೇವೆ: ಶಿವಸೇನೆ

Update: 2018-09-10 13:58 GMT

ಮುಂಬೈ, ಸೆ.10: ಪ್ರತಿಪಕ್ಷಗಳನ್ನು ಕಿಚಾಯಿಸಿರುವ ಶಿವಸೇನೆಯು,ಇಂಧನ ಬೆಲೆಗಳ ಏರಿಕೆಯನ್ನು ವಿರೋಧಿಸಿ ಕರೆ ನೀಡಿರುವ ಭಾರತ ಬಂದ್ ಅವು ಸುದೀರ್ಘ ನಿದ್ರೆಯಿಂದ ಎಚ್ಚೆತ್ತುಕೊಂಡು ದಿಢೀರ್ ಆಗಿ ತೆಗೆದುಕೊಂಡ ಕ್ರಮವಾಗಬಾರದು ಎಂದು ತಾನು ಬಯಸಿರುವುದಾಗಿ ಹೇಳಿದೆ.

ಶಿವಸೇನೆಯು ಸುದೀರ್ಘ ಕಾಲದಿಂದಲೂ ಪ್ರತಿಪಕ್ಷಗಳ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಂಡಿದೆ. ಜನಪರ ವಿಷಯಗಳಲ್ಲಿ ಈ ಪಕ್ಷಗಳ ಧೋರಣೆಯೇನು, ಅವುಗಳ ಬಲವೇನು ಎನ್ನುವುದನ್ನು ತಿಳಿದುಕೊಳ್ಳಲು ಅದೀಗ ಬಯಸಿದೆ. ಪ್ರತಿಪಕ್ಷಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಜನರ ಹಿತಾಸಕ್ತಿಗಳ ರಕ್ಷಣೆ ಸಾಧ್ಯ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸೋಮವಾರದ ಸಂಚಿಕೆಯಲ್ಲಿನ ಸಂಪಾದಕೀಯ ಲೇಖನವು ಹೇಳಿದೆ.

ಬಂದ್ ಸಂದರ್ಭದಲ್ಲಿ ತನ್ನ ತಟಸ್ಥತೆಗೆ ವಿವರಣೆಯನ್ನು ನೀಡಿರುವ ಶಿವಸೇನೆ, ಪ್ರಮುಖ ವಿಷಯಗಳಲ್ಲಿ ಪ್ರತಿಪಕ್ಷಗಳ ಬಲವೇನು ಎನ್ನುವುದನ್ನು ನೋಡಲು ತಾನು ಬಯಸಿದ್ದೇನೆ. ಹಣದುಬ್ಬರ ಹೆಚ್ಚಳ ಮತ್ತು ಇಂಧನ ಬೆಲೆಗಳ ಏರಿಕೆಯ ಮೇಲೆ ಈ ದೇಶದ ಜನರು ನಿಕಟ ನಿಗಾಯಿರಿಸಿದ್ದಾರೆ. ಪ್ರತಿಪಕ್ಷಗಳ ಬಂದ್ ಕರೆ ಅವು ಸುದೀರ್ಘ ನಿದ್ರೆಯಿಂದ ಎಚ್ಚೆತ್ತುಕೊಂಡ ಬಳಿಕ ತೆಗೆದುಕೊಂಡ ಕ್ರಮವೆಂಬಂತೆ ಕಾಣುವುದಿಲ್ಲ ಎಂದು ತಾನು ಆಶಿಸಿದ್ದೇನೆ ಎಂದಿದೆ.

ಜನರ ಸಮಸ್ಯೆಗಳ ವಿಷಯ ಬಂದಾಗ ತಮ್ಮ ಧೋರಣೆಯೇನಿರಬೇಕು ಎನ್ನುವುದನ್ನು ಪ್ರತಿಪಕ್ಷಗಳಲ್ಲಿ ಯಾರಾದರೂ ಅರಿತುಕೊಳ್ಳಲಿ ಎಂದು ಅದು ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News