ಪ್ಯಾರಿಸ್‌ನಲ್ಲಿ ಚೂರಿ ದಾಳಿ: 7 ಮಂದಿಗೆ ಗಾಯ

Update: 2018-09-10 16:39 GMT

ಪ್ಯಾರಿಸ್, ಸೆ. 10: ಪ್ಯಾರಿಸ್‌ನಲ್ಲಿ ರವಿವಾರ ವ್ಯಕ್ತಿಯೊಬ್ಬ ಚೂರಿ ಮತ್ತು ಕಬ್ಬಿಣದ ರಾಡ್‌ನಿಂದ ಜನರ ಮೇಲೆ ದಾಳಿ ನಡೆಸಿದ್ದು, ಇಬ್ಬರು ಬ್ರಿಟಿಶ್ ಪ್ರವಾಸಿಗರು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಅಫ್ಘಾನ್ ರಾಷ್ಟ್ರೀಯನೆನ್ನಲಾದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಈವರೆಗೆ, ಈ ದಾಳಿಯಲ್ಲಿ ಭಯೋತ್ಪಾದಕ ದಾಳಿಯ ಸ್ವರೂಪ ಕಂಡುಬಂದಿಲ್ಲ’’ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ. ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಅಪರಿಚಿತರ ಮೇಲೆ ದುಷ್ಕರ್ಮಿಯು ದಾಳಿ ನಡೆಸಿದನು ಎನ್ನಲಾಗಿದೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News