ಅಫ್ಘಾನ್: ಭದ್ರತಾ ಪಡೆಗಳ ಮೇಲೆ ದಾಳಿ; 37 ಸಾವು

Update: 2018-09-10 16:40 GMT

ಕಾಬೂಲ್, ಸೆ. 10: ಉತ್ತರ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರು ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 37 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ದಶ್ತಿ ಅರ್ಚಿ ಜಿಲ್ಲೆಯ ತಪಾಸಣಾ ದ್ವಾರದ ಮೇಲೆ ರವಿವಾರ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ ಎಂದು ಕುಂಡುಝ್ ಪ್ರಾಂತದ ಪ್ರಾಂತೀಯ ಕೌನ್ಸಿಲ್ ಮುಖ್ಯಸ್ಥರು ತಿಳಿಸಿದರು.

ದಾಳಿ ರವಿವಾರ ತಡ ರಾತ್ರಿ ಆರಂಭವಾಯಿತು ಹಾಗೂ ಸೋಮವಾರ ಬೆಳಗ್ಗಿನವರೆಗೂ ಮುಂದುವರಿಯಿತು. ಜೌಝನ್ ಪ್ರಾಂತದ ಖಾಮ್‌ಯಾಬ್ ಜಿಲ್ಲೆಯ ಮೇಲೆ ನಡೆದ ಇನ್ನೊಂದು ದಾಳಿಯಲ್ಲಿ, ಕನಿಷ್ಠ 8 ಪೊಲೀಸರು ಮೃತರಾಗಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ.

ಈ ಜಿಲ್ಲೆಯಿಂದ ಅಫ್ಘಾನ್ ಪಡೆಗಳು ಹಿಂದೆ ಸರಿದಿವೆ. ಈ ದಾಳಿಯಲ್ಲಿ 7 ತಾಲಿಬಾನ್ ಉಗ್ರರೂ ಹತರಾಗಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ. ಸಮಂಗನ್ ಪ್ರಾಂತದ ದರ ಸುಫ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ತಾಲಿಬಾನಿ ಉಗ್ರರು 14 ಪೊಲೀಸರನ್ನು ಕೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News