ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್ ಪತ್ನಿ ನಿಧನ

Update: 2018-09-11 16:15 GMT

ಲಂಡನ್, ಸೆ. 11: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪತ್ನಿ ಬೇಗಮ್ ಕುಲ್ಸೂಮ್ ಮಂಗಳವಾರ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಅವರು ದೀರ್ಘ ಕಾಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಅವರು 2014 ಜೂನ್‌ನಿಂದ ಲಂಡನ್‌ನ ಹ್ಯಾರ್ಲಿ ಸ್ಟ್ರೀಟ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಂಗಳವಾರ ಮುಂಜಾನೆ ಅವರ ಆರೋಗ್ಯ ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇಡಲಾಯಿತು ಎಂದು ‘ಜಿಯೋ ಟಿವಿ’ ವರದಿ ಮಾಡಿದೆ.

68 ವರ್ಷದ ಪಾಕಿಸ್ತಾನದ ಮಾಜಿ ಪ್ರಥಮ ಮಹಿಳೆಯ ಆರೋಗ್ಯ ಸೋಮವಾರ ರಾತ್ರಿಯಿಂದ ಹದಗೆಡಲು ಆರಂಭಿಸಿತ್ತು.

ನವಾಝ್ ಶರೀಫ್, ಅವರ ಮಗಳು ಮರ್ಯಮ್ ಮತ್ತು ಅಳಿಯ ಕ್ಯಾಪ್ಟನ್ (ನಿವೃತ್ತ) ಮುಹಮ್ಮದ್ ಸಫ್ದರ್ ಪ್ರಸಕ್ತ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾವಲ್ಪಿಂಡಿಯಲ್ಲಿರುವ ಅಡಿಯಾಲ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News