ಯುಪಿಎಸ್‌ಸಿ ವೆಬ್‌ಸೈಟ್ ಹ್ಯಾಕ್: ಹೋಮ್‌ಪೇಜ್‌ನಲ್ಲಿ ಡೋರೆಮನ್ ಚಿತ್ರ

Update: 2018-09-11 17:56 GMT

ಹೊಸದಿಲ್ಲಿ, ಸೆ. 11: ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ)ದ ವೆಬ್‌ಸೈಟ್ ಸೋಮವಾರ ರಾತ್ರಿ ಹ್ಯಾಕರ್‌ಗಳ ದಾಳಿಗೆ ತುತ್ತಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಸರಿಪಡಿಸಲಾಯಿತು.

 ಕೇಂದ್ರ ಸರಕಾರದ ವಿವಿಧ ಹುದ್ದೆಗಳ ನೇಮಕ ಮಾಡುವ ಕೇಂದ್ರ ಸರಕಾರದ ಅತ್ಚುಚ್ಛ ಸಂಸ್ಥೆ ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ವೆಬ್‌ಸೈಟ್‌ನಲ್ಲಿ ಜಪಾನ್ ಅನಿಮೇಟಡ್ ಪಾತ್ರ ಡೋರೆಮನ್ ಚಿತ್ರ ಕಾಣಿಸಿಕೊಂಡಿತ್ತು. ‘ಡೋರೆಮನ್ ಕರೆ ಸ್ವೀಕರಿಸುತ್ತಾರೆ’ ಎಂಬ ಸಂದೇಶ ಚಿತ್ರದ ಮೇಲೆ ಬರೆಯಲಾಗಿತ್ತು. ವೆಬ್‌ಸೈಟ್ ಪ್ರವೇಶಿಸಿದಾಗ ಅನಿಮೇಟಡ್ ಡೋರೆಮನ್‌ನ ಹಿಂದಿಯ ಹಿನ್ನೆಲೆ ಸಂಗೀತ ಕೇಳಿ ಬರುತ್ತಿತ್ತು. ಹ್ಯಾಕರ್‌ಗಳು ದಾಳಿ ನಡೆಸಿದ ಬಳಿಕ ಆಯೋಗದ ವೆಬ್‌ಸೈಟ್ ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಅನಂತರ ಸರಿಪಡಿಸಲಾಯಿತು. ಯುಪಿಎಸ್‌ಸಿ ವೆಬ್‌ಸೈಟ್ ಅನ್ನು ಯಾರು ಹ್ಯಾಕ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ವೆಬ್‌ಸೈಟ್ ಹ್ಯಾಕ್ ಆದ ಕೂಡಲೇ ಟ್ವಟ್ಟರ್‌ನ ಹಲವು ಬಳಕೆದಾರರು ಸ್ಕ್ರೀನ್ ಶಾಟ್ ಅನ್ನು ಟ್ವೀಟ್ ಮಾಡಿದ್ದರು.

ಹಲವರು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಹಾಗೂ ಡಿಜಿಟಲ್ ಇಂಡಿಯಾಕ್ಕೆ ಟ್ಯಾಗ್ ಮಾಡಿದ್ದರು.

ಸರಕಾರದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಎಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿತ್ತು. ಇದೇ ತಿಂಗಳು ರಕ್ಷಣ ಸಚಿವಾಲಯದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News