ಕಬ್ಬಿನಿಂದ ಮಧುಮೇಹ ಬರುತ್ತದೆ, ಆದ್ದರಿಂದ ಬೇರೆ ಬೆಳೆ ಬೆಳೆಯಿರಿ: ರೈತರಿಗೆ ಆದಿತ್ಯನಾಥ್ ಸಲಹೆ

Update: 2018-09-12 09:43 GMT

ಲಕ್ನೋ, ಸೆ.12: ಕಬ್ಬು ಬೆಳೆಯ ಹೆಚ್ಚಿನ ಉತ್ಪಾದನೆಯಿಂದ ಹೆಚ್ಚಿನ ಬಳಕೆಯಾಗುತ್ತದೆ. ಇದು ನಂತರ ಮಧುಮೇಹಕ್ಕೆ ಕಾರಣವಾಗುತ್ತದೆ. ಆದ್ದರಿಂದ ರೈತರು ಕಬ್ಬನ್ನು ಬಿಟ್ಟು ಬೇರೆ ಬೆಳೆಯನ್ನು ಬೆಳೆಯಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಬಾಘ್ ಪತ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಬ್ಬನ್ನು ಮಾತ್ರ ಬೆಳೆಯುವುದನ್ನು ಬಿಟ್ಟು ರೈತರು ತರಕಾರಿಗಳಂತಹ ಬೆಳೆಗಳನ್ನು ಬೆಳೆಯಬೇಕು. ಸಕ್ಕರೆಯ ಹೆಚ್ಚಿನ ಉತ್ಪಾದನೆ ಬಳಕೆಗೂ ಕಾರಣವಾಗುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಇಂದು ನೀವು ಅತೀ ಹೆಚ್ಚು ಕಬ್ಬು ಬೆಳೆಯುತ್ತಿದ್ದೀರಿ” ಎಂದು ಆದಿತ್ಯನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News