ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಡುಟೀ ಚಂದ್ ಸಿದ್ಧತೆ

Update: 2018-09-12 14:41 GMT

ಬೆಂಗಳೂರು, ಸೆ.12: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ಹಾಗೂ ವರ್ಲ್ಡ್ ಯೂಥ್ ಚಾಂಪಿಯನ್‌ಶಿಪ್ಸ್‌ನಲ್ಲಿ ವಿಶೇಷ ಸಾಧನೆ ಮಾಡಿರುವ ಡುಟೀ ಚಂದ್ ಮುಂದಿನ 2020 ರಲ್ಲಿ ನಡೆಯಲಿರುವ ಬೇಸಿಗೆ ಒಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

2017 ರಲ್ಲಿ ಭುವನೇಶ್ವರದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, ತೈಪೆಯಲ್ಲಿ ನಡೆದ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ, ಪುಣೆಯಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದರು. ಅಲ್ಲದೆ, 2013 ರಲ್ಲಿ ಐಎಎಎಫ್ ವಿಶ್ವ ಯೂಥ್ ಚಾಂಪಿಯನ್ಸ್‌ಶಿಪ್ಸ್‌ನಲ್ಲಿ 100 ಮೀಟರ್ ಓಟದಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ ಮೊದಲ ಭಾರತೀಯಳು ಎನಿಸಿಕೊಂಡಿದ್ದರು. ನಂತರ 100 ಮತ್ತು 200 ಮೀಟರ್ ಓಟದಲ್ಲಿ ಸೀನಿಯರ್ ನ್ಯಾಷನಲ್ ಚಾಂಪಿಯನ್ ಎನಿಸಿಕೊಂಡಿದ್ದರು. 20014 ರಲ್ಲಿ ತೈಪೆಯಲ್ಲಿ ನಡೆದ ಜೂನಿಯನ್ ಚಾಂಪಿಯನ್ಸ್‌ನಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡುಟೀ ಚಂದ್, ಅತ್ಯಂತ ಬಡ ಕುಟುಂಬದಿಂದ ಬಂದ ನಾನು ಇಂದು ವಿಶ್ವಮಟ್ಟದಲ್ಲಿ ಆಟಗಾರ್ತಿಯಾಗಿ, ಓಟಗಾರ್ತಿಯಾಗಿ ರೂಪಗೊಳ್ಳಲು ಹಲವಾರು ಜನರು ಸಹಕಾರ ನೀಡಿದ್ದಾರೆ. ಅವರ ಬೆಂಬಲದಿಂದಲೇ ಮುಂದಿನ ಟೋಕಿಯಾದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ಹಿಂದಿನ ಎಲ್ಲ ಗೆಲುವುಗಳು ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸನ್ನು ತುಂಬಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News