ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಚುನಾವಣೆಗೆ ನಾವು ಇವಿಎಂ ಒದಗಿಸಿಲ್ಲ: ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ

Update: 2018-09-14 10:23 GMT

ಹೊಸದಿಲ್ಲಿ, ಸೆ. 14: ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್ ಚುನಾವಣೆಗೆ ಉಪಯೋಗಿಸಲಾದ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಚುನಾವಣಾ ಆಯೋಗ ನೀಡಿಲ್ಲ, ಬದಲಾಗಿ ಅವುಗಳನ್ನು ಖಾಸಗಿ ಮೂಲಗಳಿಂದ ಪಡೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಇಂದು ಸ್ಪಷ್ಟ ಪಡಿಸಿದೆ.

ಇವಿಎಂಗಳು ದೋಷಪೂರಿತವಾಗಿವೆ ಎಂದು ವಿದ್ಯಾರ್ಥಿಗಳು ಗದ್ದಲವೆಬ್ಬಿಸಿದ ಕಾರಣ ಗುರುವಾರ ನಡೆಯುತ್ತಿದ್ದ  ಮತ ಎಣಿಕೆ ಕಾರ್ಯವನ್ನು ಅರ್ಧ ದಲ್ಲಿಯೇ ನಿಲ್ಲಿಸಬೇಕಾಗಿ ಬಂದ ನಂತರ ಚುನಾವಣಾ ಆಯೋಗದಿಂದ ಈ ಸ್ಪಷ್ಟೀಕರಣ ಬಂದಿದೆ.

ಆರಂಭದಲ್ಲಿ ಇವಿಎಂ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅರ್ಧ ಗಂಟೆ ಮತ ಎಣಿಕೆಯನ್ನು ನಿಲ್ಲಿಸಲಾಯಿತಾದರೂ ನಂತರ ವಿದ್ಯಾರ್ಥಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ ಮತ ಎಣೆಕೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತಾದರೂ ನಂತರ ಮತ್ತೆ ಎಲ್ಲರ ಒಪ್ಪಿಗೆ ಪಡೆದು ಮತ ಎಣಿಕೆ ಮುಂದುವರಿದಿದೆ.

ರಾಜ್ಯ ಚುನಾವಣಾ ಆಯೋಗವೂ ದಿಲ್ಲಿ ವಿವಿ ಚುನಾವಣೆಗೆ ಇವಿಎಂಗಳನ್ನು ಒದಗಿಸಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News