ಬೆಂಗಳೂರು: ಅಪರಿಚಿತ ವಾಹನ ಢಿಕ್ಕಿ; ತಾಯಿ-ಮಗು ಮೃತ್ಯು

Update: 2018-09-14 12:36 GMT

ಬೆಂಗಳೂರು, ಸೆ.14: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ತಾಯಿ-ಹೆಣ್ಣು ಮಗು ಸ್ಥಳದಲ್ಲೆ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹೆಬ್ಬಾಳ ಬಳಿಯ ಲುಂಬಿನಿ ಗಾರ್ಡನ್ ಬಳಿ ಶುಕ್ರವಾರ ಈ ಘಟನೆ ನಡೆದಿದ್ದು, ಸುರೇಖಾ, ಆರಾಧ್ಯ ಎಂಬವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ರಘು ಮತ್ತು ಸುರೇಖಾ, ಮಗಳು ಅರಾಧ್ಯ ರಾತ್ರಿ ಹಬ್ಬಕ್ಕೆ ಸಂಬಂಧಿ ಮನೆಗೆ ತೆರಳಿ ಹಿಂದಿರುಗುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ರಘು ಸ್ಥಿತಿ ಗಂಭೀರವಾಗಿದ್ದು, ತಾಯಿ-ಮಗಳು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಯಾವ ರೀತಿ ಅಪಘಾತ ನಡೆದಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News