ಜೆಡಿಎಸ್‌ನಿಂದಲೇ ಬಿಜೆಪಿಗೆ 30 ಸ್ಥಾನ ಹೆಚ್ಚು ಬಂದದ್ದು: ಸಚಿವ ಎಚ್.ಡಿ.ರೇವಣ್ಣ

Update: 2018-09-15 14:24 GMT

ಬೆಂಗಳೂರು, ಸೆ. 15: ಜೆಡಿಎಸ್ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಬಿಜೆಪಿಯವರು ಹೆಚ್ಚಿನ ಸ್ಥಾನ ಗಳಿಸಿದ್ದಾರೆ. ಜೆಡಿಎಸ್‌ನಿಂದಲೇ ಅವರಿಗೆ 30 ಸೀಟುಗಳು ಹೆಚ್ಚಾಗಿ ಬಂದಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇವರ ಮತ್ತು ಜನತೆ ಆಶೀರ್ವಾದವಿದ್ದಿದ್ದರೆ ಬಿಜೆಪಿಯವರೇ ಅಧಿಕಾರ ಹಿಡಿಯಬೇಕಿತ್ತಲ್ಲಾ? ಏಕೆ ಅವರು ಸರಕಾರ ರಚನೆ ಮಾಡುವುದಕ್ಕೆ ಆಗಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಕಿಂಗ್‌ಪಿನ್, ಮಾಫಿಯಾ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ನಮ್ಮ ಪಕ್ಷದವರು ಯಾರು ಸಂಪರ್ಕದಲ್ಲಿದ್ದಾರೆಂಬ ಬಗ್ಗೆಯೂ ನನಗೆ ಯಾವುದೇ ಮಾಹಿತಿ ಇಲ್ಲ ಎಂದ ರೇವಣ್ಣ, ಕುಮಾರಸ್ವಾಮಿಯವರೆ ಮುಖ್ಯಮಂತ್ರಿಯಾಗಿರುತ್ತಾರೆ. ಈ ಬಗ್ಗೆ ಯಾರೂ ಧೃತಿಗೆಡುವ ಅಗತ್ಯ ಇಲ್ಲ ಎಂದು ಅಭಯ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News