ಬಾಕ್ಸಿಂಗ್ ಟೂರ್ನಿ: ಸಿಮ್ರಾನ್‌ಜಿತ್‌ಗೆ ಸ್ವರ್ಣ ಸಂಭ್ರಮ

Update: 2018-09-16 04:51 GMT

ಹೊಸದಿಲ್ಲಿ, ಸೆ.16: ಭಾರತದ ಬಾಕ್ಸರ್ ಸಿಮ್ರಾನ್‌ಜಿತ್ ಕೌರ್ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಅಹ್ಮೆಟ್ ಕಾಮೆರ್ಟ್ ಟೂರ್ನಮೆಂಟ್‌ನ ಮಹಿಳೆಯರ 64 ಕೆಜಿ ತೂಕ ವಿಭಾಗದಲ್ಲಿ ಸ್ವರ್ಣ ಪದಕ ಸಂಪಾದಿಸಿದ್ದಾರೆ.

ಪಿಂಕಿ ಜಾಂಗ್ರಾ 51 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಮಾಜಿ ರಾಷ್ಟ್ರೀಯ ಪದಕ ವಿಜೇತೆ ಸಿಮ್ರಾನ್‌ಜಿತ್ ಟರ್ಕಿಯ ಸೆಮಾ ಕಾಲಿಸ್ಕಾನ್‌ರನ್ನು ಸೋಲಿಸಿ ಚಿನ್ನದ ನಗೆ ಬೀರಿದರು.

ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಬಾಕ್ಸರ್ ಪಿಂಕಿ ಜಾಂಗ್ರಾ ಟರ್ಕಿಯ ಇನ್ನೋರ್ವ ಬಾಕ್ಸರ್ ಬುಸೆಂನಾಝ್ ಕಾಕಿರೊಗ್ಲು ವಿರುದ್ಧ ಸೋಲುವುದರೊಂದಿಗೆ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News