ರಾಜಧಾನಿಯಲ್ಲಿ ಧಾರಕಾರ ಮಳೆ: ಧರೆಗುರುಳಿದ ಮರಗಳು, ಸಂಚಾರ ದಟ್ಟಣೆ

Update: 2018-09-16 14:08 GMT

ಬೆಂಗಳೂರು, ಸೆ.16: ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ಮಧ್ಯಾಹ್ನ ಸುರಿದ ಧಾರಕಾರ ಮಳೆಯಿಂದಾಗಿ ಬೃಹತ್ ಮರಗಳು ಉರುಳಿ ಬಿದ್ದಿದ್ದು, ಕೆಲ ಕಡೆ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡುವಂತಹ ವಾತಾವರಣ ನಿರ್ಮಾಣವಾಗಿತ್ತು.

ನಗರದ ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ಮರಗಳು ಏಕಾಏಕಿ ಧರೆಗುರುಳಿದ ಪರಿಣಾಮ ಆಟೊ, ಎರಡು ಕಾರು ಜಖಂಗೊಂಡಿವೆ. ಅದೇ ರೀತಿ, ರಾಜಾಜಿನಗರದ ಪ್ರಸನ್ನ ಚಿತ್ರಮಂದಿರದ ಮುಂಭಾಗದಲ್ಲಿ ನಿಂತಿದ್ದ ಆಟೊ ಮೇಲೆ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಇಂದಿರಾನಗರದ ಹೊಯ್ಸಳ ನಗರದಲ್ಲಿ ತೆಂಗಿನ ಮರವೊಂದು ವಿದ್ಯುತ್ ಕಂಬ ಮತ್ತು ಕಾರಿನ ಮೇಲೆ ಬಿದ್ದ ಪರಿಣಾಮ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ, ನಗರದ ಕೆಲ ತಗ್ಗ ಪ್ರದೇಶದಲ್ಲಿರುವ ಮಳೆ ನೀರು ನುಗ್ಗಿದೆ ಎಂದು ವರದಿಯಾಗಿದೆ.

ಮೂರು ದಿನದಿಂದ ಮಳೆ: ಸತತ ಮೂರು ದಿನಗಳಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿದೆ. ರವಿವಾರವೂ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಇನ್ನು ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News