500ನೇ ಗೋಲು ಬಾರಿಸಿದ ಸ್ವೀಡನ್ ಫುಟ್ಬಾಲ್ ಆಟಗಾರ ಇಬ್ರಾಹಿಮೊವಿಕ್

Update: 2018-09-16 18:30 GMT

ಲಾಸ್ ಏಂಜಲ್ಸ್, ಸೆ.16: ಸ್ವೀಡನ್‌ನ ಸ್ಟ್ರೈಕರ್ ಝ್ಲಾಟನ್ ಇಬ್ರಾಹಿಮೊವಿಕ್ ವೃತ್ತಿಜೀವನದ 500ನೇ ಗೋಲು ದಾಖಲಿಸುವುದರೊಂದಿಗೆ ಇತಿಹಾಸ ನಿರ್ಮಿಸಿದರು.

 ಗ್ಯಾಲಕ್ಸಿ ಫುಟ್ಬಾಲ್ ಕ್ಲಬ್‌ನ್ನು ಪ್ರತಿನಿಧಿಸುತ್ತಿರುವ 36ರ ಹರೆಯದ ಇಬ್ರಾಹಿಮೊವಿಕ್ ಟೊರಾಂಟೊ ಎಫ್‌ಸಿ ವಿರುದ್ಧ ಈ ಸಾಧನೆ ಮಾಡಿದರು. ಆರಡಿ ಎತ್ತರದ ಇಬ್ರಾಹಿಮೊವಿಕ್ 43ನೇ ನಿಮಿಷದಲ್ಲಿ ಎದುರಾಳಿ ತಂಡದ ಗೋಲ್‌ಕೀಪರ್ ಅಲೆಕ್ಸ್ ಬೊನೊರನ್ನು ವಂಚಿಸಿ ಗೋಲು ದಾಖಲಿಸಿದರು. ಇಬ್ರಾಹಿಮೊವಿಕ್ 500 ಗೋಲು ಮೈಲುಗಲ್ಲು ತಲುಪಿದ ಮೂರನೇ ಸಕ್ರಿಯ ಫುಟ್ಬಾಲ್ ಆಟಗಾರನಾಗಿದ್ದಾರೆ. ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಈ ಸಾಧನೆ ಮಾಡಿದ್ದಾರೆ.

ಇಬ್ರಾಹಿಮೊವಿಕ್ ಸ್ವೀಡನ್ ಪರ 62 ಗೋಲುಗಳನ್ನು ಬಾರಿಸಿದ್ದಾರೆ. ಉಳಿದ ಗೋಲುಗಳನ್ನು ಮಾಲ್ಮೊ ಎಫ್‌ಸಿ, ಅಜಾಕ್ಸ್, ಜುವೆಂಟಸ್, ಇಂಟರ್ ಮಿಲನ್, ಬಾರ್ಸಿಲೋನ, ಎಸಿ ಮಿಲನ್, ಪ್ಯಾರಿಸ್ ಸೈಂಟ್-ಜರ್ಮೈನ್, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಗ್ಯಾಲಕ್ಸಿ ಫುಟ್ಬಾಲ್ ಕ್ಲಬ್‌ಗಳ ಪರ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News