ಸ್ಯಾರಿಡಾನ್, ಇತರ ಎರಡು ನಿಷೇಧಿತ ಔಷಧಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Update: 2018-09-17 08:58 GMT

ಹೊಸದಿಲ್ಲಿ, ಸೆ.17: ಕಳೆದ ವಾರ ಕೇಂದ್ರ ಸರಕಾರ ಸ್ಯಾರಿಡಾನ್ ಸೇರಿದಂತೆ 328 ಕಾಂಬಿನೇಶನ್ ಔಷಧಿಗಳ ಮಾರಾಟಕ್ಕೆ ನಿಷೇಧ ಹೇರಿದ್ದರೆ ಸದ್ಯದ ಮಟ್ಟಿಗೆ ಸ್ಯಾರಿಡಾನ್ ಮತ್ತು ಇತರ ಎರಡು ಔಷಧಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿಸಿದೆ.

ಔಷಧಿ ತಯಾರಕರ ಅಪೀಲಿನ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. 1988ಗಿಂತ ಮುಂಚಿಗಿಂತಲೂ ತಯಾರಾಗುತ್ತಿರುವ ಫಿಕ್ಸೆಡ್ ಡೋಸ್ ಕಾಂಬಿನೇಶನ್ ಔಷಧಿಗಳ ಮೇಲೆ ಸರಕಾರ ಹೇರಿರುವ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲಿನ ಬಗ್ಗೆ ಕೇಂದ್ರ ಸರಕಾರ ಉತ್ತರ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಕೆಲವೊಂದು ಔಷಧಿಗಳ ಬೇಕಾಬಿಟ್ಟಿ ಬಳಕೆ ತಡೆಗೆ ಸರಕಾರ ಸ್ಯಾರಿಡಾನ್ ಹಾಗೂ ಸ್ಕಿನ್ ಕ್ರೀಮ್ ಪ್ಯಾಂಡರ್ಮ್ ಸಹಿತ 328 ಔಷಧಿಗಳ ಮೇಲೆ ನಿಷೇಧ ಹೇರಿತ್ತು.

ಔಷಧಿ ತಾಂತ್ರಿಕ ಸಲಹಾ ಮಂಡಳಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿತ್ತಲ್ಲದೆ, ಕೆಲವೊಂದು ಔಷಧಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನಿಷೇಧಿಸುವುದು ಅಗತ್ಯ ಎಂದು ಹೇಳಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News