ವಿಕಲಚೇತನರಿಗೆ ಉದ್ಯೋಗ ಸಿಗಲಿ

Update: 2018-09-18 18:32 GMT

ಮಾನ್ಯರೇ,

ವಿಕಲಚೇತನರು ಎಂಬ ಕಾರಣಕ್ಕೆ ಸಮಾಜದಿಂದ ಕಡೆಗಣಿಸಲ್ಪಟ್ಟ ಯುವಜನತೆ ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲ್ಲರಂತೆ ಅವರು ಕೂಡಾ ವಿದ್ಯಾಭ್ಯಾಸ ಮುಗಿಸಿ ಉದ್ಯೋಗದ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಅವರ ಕನಸು ಮಾತ್ರ ನನಸಾಗುತ್ತಿಲ್ಲವೆಂಬುದು ಕಳವಳದ ಸಂಗತಿ.
ಇಂದಿನ ಸ್ಥಿತಿ ಹೇಗಾಗಿದೆಯೆಂದರೆ, ಸರಕಾರಿ ಯೋಜನೆಗಳು ಕೇವಲ ಮಾಸಾಶನ ಮತ್ತು ಬಸ್ ಪಾಸ್ ಮತ್ತು ಕೆಲವು ಸಾಲಗಳಿಗೆ ಮಾತ್ರ ಸೀಮಿತವಾಗುತ್ತಿವೆ. ಮೀಸಲಾತಿಯಡಿಯಲ್ಲಿ ಸಿಗುತ್ತಿರುವ ಕೆಲಸಗಳು ತೀರ ಕಡಿಮೆ. ವಿಕಲಚೇತನರು ಎಂದಾಕ್ಷಣ ರಸ್ತೆ ಬದಿಯ ಪುಟ್ಟ ಅಂಗಡಿ ಮತ್ತು ಯಾವುದೊಂದು ಸ್ವ ಉದ್ಯೋಗವೆಂದು ಭಾವಿಸುವುದೇ ಹೆಚ್ಚು. ಆದರೆ ಇತರರ ಹಾಗೆ ಎಲ್ಲಾ ವಲಯದಲ್ಲೂ ಅವರು ಕೂಡಾ ಕೆಲಸ ಮಾಡುವ ಅರ್ಹತೆಯನ್ನು ಹೊಂದಿರುತ್ತಾರೆ. ಆದ್ದರಿಂದ ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಇತರ ಕ್ಷೇತ್ರದಲ್ಲೂ ಅವಕಾಶಗಳನ್ನು ವಿಸ್ತೃತಗೊಳಿಸಬೇಕು. ಏಕೆಂದರೆ ಅವರಿಗೂ ಭವಿಷ್ಯದ ಆತಂಕ, ಆಸೆ ಇದೆ. ಇದನ್ನು ಸರಕಾರ ಮನಗಂಡು ಹೆಚ್ಚು ವಿಕಲಚೇತನರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳಿಗೆ ಮುಂದಾಗಬೇಕು ಮತ್ತು ಅವರಿಗೆ ಸಾಲ ಸೌಲಭ್ಯಗಳನ್ನು ಇನ್ನೂ ಹೆಚ್ಚಿಸಬೇಕಲ್ಲದೆ, ಸರಿಯಾದ ಸಮಯಕ್ಕೆ ಸಾಲ ಸಿಗುವ ಹಾಗೆ ಅಧಿಕಾರಿಗಳು ಗಮನ ಹರಿಸಬೇಕು.

Writer - -ಧನಲಕ್ಷ್ಮೀ ಬಿ., ಮಂಡ್ಯ

contributor

Editor - -ಧನಲಕ್ಷ್ಮೀ ಬಿ., ಮಂಡ್ಯ

contributor

Similar News