ಮೇರಿ ಕೋಮ್ 4 ಗಂಟೆಗಳಲ್ಲಿ 2 ಕೆ.ಜಿ ತೂಕ ಕಳೆದುಕೊಂಡದ್ದು ಹೇಗೆ ?

Update: 2018-09-19 08:11 GMT

ಹೊಸದಿಲ್ಲಿ, ಸೆ.19: ಖ್ಯಾತ ಮಹಿಳಾ ಬಾಕ್ಸರ್  ಮೇರಿ ಕೋಮ್ ಅವರು ಪೋಲೆಂಡ್ ನಲ್ಲಿ ಕೇವಲ 4 ಗಂಟೆಗಳಲ್ಲಿ 2 ಕೆ.ಜಿ. ತೂಕ ಕಳೆದುಕೊಂಡು ಬಾಕ್ಸಿಂಗ್  ನ 48 ಕೆ.ಜಿ  ವಿಭಾಗ ದ ಸ್ಪರ್ಧೆಯಲ್ಲಿ ಚಿನ್ನ ಬಾಚಿಕೊಳ್ಳುವ ಮೂಲಕ ಸುದ್ದಿಗೆ ಗುದ್ದು ನೀಡಿದ್ದಾರೆ.

ಈ ವರ್ಷದಲ್ಲಿ ಮೂರನೇ ಬಾರಿ ಚಿನ್ನ ಜಯಿಸಿರುವ ಮೇರಿ ಕೋಮ್  ಮೂರು ದಿನಗಳ ಹಿಂದೆ ಪೊಲೆಂಡ್‌ನ ಗ್ಲಿವೈಸ್‌ನಲ್ಲಿ  ಮಹಿಳೆಯರ  13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬಾಕ್ಸರ್ ಮೇರಿ ಕೋಮ್ ಚಿನ್ನ  ಜಯಿಸಿದ್ದರು. ಆದರೆ ಚಿನ್ನ ಗೆಲ್ಲುವ ಮೊದಲು ತೂಕ ಕಡಿಮೆ ಏನು ಮಾಡಿದರು ಎನ್ನುವುದನ್ನು ಅವರು ಇದೀಗ ಬಹಿರಂಗ ಪಡಿಸಿದ್ದಾರೆ.
"ಪೋಲೆಂಡ್ ಗೆ  ನಾವು ಬೆಳಗ್ಗಿನ ಜಾವ  3:30ಕ್ಕೆ ತಲುಪಿದ್ದೆವು .   ನನ್ನ ದೇಹದ ತೂಕ 2 ಕೆ.ಜಿ ಜಾಸ್ತಿ ಇತ್ತು. 2 ಕೆ.ಜಿ. ತೂಕ ಕಡಿಮೆ ಮಾಡದಿದ್ದರೆ ಸ್ಪರ್ಧಿಸಲು ಸಾಧ್ಯವಿರಲಿಲ್ಲ.  ಈ ಕಾರಣಕ್ಕಾಗಿ ಸ್ಕಿಪ್ಪಿಂಗ್ ಮಾಡಿ ದೇಹದ ತೂಕ ಕಳೆದುಕೊಂಡೆ " ಎಂದು ಮೇರಿ ಕೋಮ್ ಹೇಳಿದ್ದಾರೆ.
ಮೇರಿ ಕೋಮ್ 48 ಕೆಜಿ ವಿಭಾಗದಲ್ಲಿ  ಚಿನ್ನ ಗೆಲ್ಲುವು  ಕನಸಿನೊಂದಿಗೆ ಪೋಲೆಂಡ್ ಗೆ   ಹಾರಿದ್ದರು.   2 ಕೆ.ಜಿ. ತೂಕ ಜಾಸ್ತಿ ಇರುವ ಕಾರಣಕ್ಕಾಗಿ ಅನರ್ಹಗೊಳ್ಳುವ ಭೀತಿಯನ್ನು ಎದುರಿಸಿದ್ದ ಮೇರಿ ಕೋಮ್ ಸತತ 1 ಗಂಟೆ ಕಾಲ ಸ್ಕಿಪ್ಪಿಂಗ್   ನಡೆಸಿದರು. ಅವರ ಪ್ರಯತ್ನ ಫಲ ನೀಡಿತು.  2  ಕೆ.ಜಿ. ತೂಕ ಕಳೆದುಕೊಂಡರು.  ಸ್ಪರ್ಧೆಯಲ್ಲಿ ಎದುರಾಳಿಗಳನ್ನು ಮಣಿಸಿ ಚಿನ್ನ ಗೆದ್ದುಕೊಂಡರು. ಇದು ಅವರು ಈ ವರ್ಷ ಜಯಿಸಿರುವ ಮೂರನೇ ಚಿನ್ನ.

ದಿಲ್ಲಿಯಲ್ಲಿ ಇಂಡಿಯಾ ಓಪನ್ ಹಾಗೂ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಮೇರಿ ಚಿನ್ನದ ಸಾಧನೆ ಮೆರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News