ಟರ್ಕಿ: 24 ವಿಮಾನ ನಿಲ್ದಾಣ ನೌಕರರ ಬಂಧನ

Update: 2018-09-19 17:15 GMT

ಇಸ್ತಾಂಬುಲ್, ಸೆ. 19: ಕೆಲಸದ ಪರಿಸರ ಸರಿ ಇಲ್ಲ ಎಂಬುದಾಗಿ ಇಸ್ತಾಂಬುಲ್‌ನ ನೂತನ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ 24 ಮಂದಿಯನ್ನು ಟರ್ಕಿಯ ನ್ಯಾಯಾಲಯವೊಂದು ಜೈಲಿಗೆ ಕಳುಹಿಸಿದೆ ಎಂದು ‘ಸಿಎನ್‌ಎನ್ ಟರ್ಕ್’ ಚಾನೆಲ್ ಬುಧವಾರ ವರದಿ ಮಾಡಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿರುವುದಕ್ಕಾಗಿ 400ಕ್ಕೂ ಅಧಿಕ ಮಂದಿಯನ್ನು ಆರಂಭದಲ್ಲಿ ಬಂಧಿಸಲಾಗಿತ್ತು ಎಂದು ಇಸ್ತಾಂಬುಲ್ ಗವರ್ನರ್ ರವಿವಾರ ಹೇಳಿದ್ದರು.

ವಿಮಾನ ನಿಲ್ದಾಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸೋಮವಾರ ಕೆಲಸ ಪುನರ್‌ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News