ಈ ದಿನ

Update: 2018-09-19 18:26 GMT

1519: ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗಲನ್ ನಾಯಕತ್ವದ ತಂಡ ಈ ದಿನ ತನ್ನ ಪ್ರಥಮ ಯಶಸ್ವಿ ವಿಶ್ವಪರ್ಯಟನೆಯನ್ನು ಪೂರ್ಣಗೊಳಿಸಿತು. ಆದರೆ ಮೆಗಲನ್ ಮಾರ್ಗ ಮಧ್ಯದಲ್ಲಿಯೇ ಹತ್ಯೆಯಾದನು.

1857: ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಬ್ರಿಟಿಷ್ ಸೇನಾಪಡೆಗಳು ಈ ದಿನ ದಿಲ್ಲಿಯನ್ನು ವಶಪಡಿಸಿಕೊಂಡವು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ದಂಗೆಯೆದ್ದಿದ್ದ ಅನೇಕ ಸಂಸ್ಥಾನಗಳು ದಿಲ್ಲಿಯನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡು 80 ವರ್ಷ ವಯಸ್ಸಿನ ಮೊಗಲ್ ದೊರೆ ಬಹದ್ದೂರ್ ಶಾ ಜಾಫರ್‌ರನ್ನು ತಮ್ಮ ದೊರೆ ಎಂದು ಘೋಷಿಸಿಕೊಂಡು ಹೋರಾಟಕ್ಕಿಳಿದವು. ಆದರೆ ಸೂಕ್ತ ನಿರ್ವಹಣೆ, ಒಗ್ಗಟ್ಟಿನ ಕೊರತೆಯಿಂದ ಈ ದಂಗೆ ವಿಫಲವಾಯಿತು.

1878: ಇಂಗ್ಲಿಷ್ ದಿನಪತ್ರಿಕೆ ‘ದಿ ಹಿಂದೂ’ ಪ್ರಥಮ ಬಾರಿಗೆ ವಾರಪತ್ರಿಕೆಯಾಗಿ ಪ್ರಕಟವಾಯಿತು. ಚೆನ್ನೈನಲ್ಲಿ ಕಾನೂನು ವಿದ್ಯಾರ್ಥಿಗಳಿಂದ ರಚನೆಗೊಂಡ ಈ ಪತ್ರಿಕೆಯು ಆರಂಭದಲ್ಲಿ ಬ್ರಿಟಿಷರು ಭಾರತೀಯರಿಗೆ ತೋರುತ್ತಿದ್ದ ತಾರತಮ್ಯ ನೀತಿಗೆ ಪ್ರತಿಭಟನಾರ್ಥವಾಗಿ ರೂಪುಗೊಂಡಿತು. 1889ರಿಂದ ಈ ಪತ್ರಿಕೆಯು ದೈನಿಕವಾಗಿ ಪ್ರಕಟವಾಗಲಾರಂಭಿಸಿತು.

1967: ಟೆಕ್ಸಾಸ್-ಮೆಕ್ಸಿಕೊ ಗಡಿಯಲ್ಲಿ ಬೀಸಿದ ಪ್ರಬಲ ಚಂಡಮಾರುತಕ್ಕೆ 38 ಜನ ಬಲಿಯಾದರು.

1979: ನಾಸಾವು ‘ಎಚ್‌ಇಎಒ 3’ ಎಂಬ ಉಪಗ್ರಹವನ್ನು ಉಡಾವಣೆ ಮಾಡಿತು.

1983: 1981ರ ಜೂನ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಆ್ಯಪಲ್ ಉಪಗ್ರಹ 1983ರ ಸೆ.20ರ ಈ ದಿನ ಕಾರ್ಯಾಚರಣೆ ನಿಲ್ಲಿಸಿತು.

1990: ವಿಭಜನೆಗೊಂಡಿದ್ದ ಪಶ್ಚಿಮ ಮತ್ತು ಪೂರ್ವ ಜರ್ಮನಿಗಳು ಒಗ್ಗೂಡಲು ಪರಸ್ಪರ ಒಪ್ಪಿದವು.

1928: ಸಮಾನತೆಯ ಹರಿಕಾರ, ಸಮಾಜ ಸುಧಾರಕ ನಾರಾಯಣ ಗುರು ಈ ದಿನ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ