ಯಶಸ್ಸಿನ ಗುಟ್ಟುಬಿಚ್ಚಿಟ್ಟ ಕೇದಾರ್ ಜಾಧವ್

Update: 2018-09-20 18:30 GMT

ದುಬೈ, ಸೆ.20: ಭಾರತದ ಪಾರ್ಟ್-ಟೈಮ್ ಬೌಲರ್ ಕೇದಾರ್ ಜಾಧವ್ ಪಾಕಿಸ್ತಾನ ವಿರುದ್ಧ ಬುಧವಾರ ನಡೆದ ಏಶ್ಯಕಪ್ ಪಂದ್ಯದಲ್ಲಿ 23 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿ ತಂಡದ ಭರ್ಜರಿ ಗೆಲುವಿಗೆ ಕಾಣಿಕೆ ನೀಡಿದ್ದರು. ಸಾಂಪ್ರದಾಯಿಕ ಎದುರಾಳಿ ವಿರುದ್ಧ ತನ್ನ ಉತ್ತಮ ಪ್ರದರ್ಶನಕ್ಕೆ ಕಾರಣವಾದ ಅಂಶವನ್ನು ಜಾಧವ್ ಬಹಿರಂಗಪಡಿಸಿದ್ದಾರೆ.

‘‘ನೆಟ್‌ಪ್ರಾಕ್ಟೀಸ್ ವೇಳೆ ಹೆಚ್ಚು ಬೌಲಿಂಗ್ ಮಾಡದೇ ಇರುವುದು ನನ್ನ ಯಶಸ್ಸಿನ ಗುಟ್ಟು. ನಾನು ನೆಟ್ಸ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡದೇ ಪಂದ್ಯಕ್ಕಿಂತ ಮೊದಲು ಪ್ರಾಕ್ಟೀಸ್ ಸೆಶನ್‌ನಲ್ಲಿ ಅಭ್ಯಾಸಕ್ಕೆ ಒತ್ತು ನೀಡಿದ್ದೆ. ನಾನು ಸರ್ಜರಿಗೆ ಒಳಗಾದ ಬಳಿಕ ಫಿಟ್‌ನೆಸ್ ಕೂಡ ಸುಧಾರಿಸಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ತರಬೇತಿ ಹಾಗೂ ಫಿಟ್‌ನೆಸ್ ವಿಷಯದಲ್ಲಿ ಸಾಕಷ್ಟು ಕಲಿತ್ತಿದ್ದೇನೆ. ನಾನೊಬ್ಬ ವಿಭಿನ್ನ ಕ್ರಿಕೆಟಿಗನಾಗಲು ಇದು ಖಂಡಿತವಾಗಿಯೂ ನೆರವಾಗಿದೆ’’ ಎಂದು 42 ಏಕದಿನ ಪಂದ್ಯಗಳನ್ನು ಆಡಿರುವ ಜಾಧವ್ ಹೇಳಿದ್ದಾರೆ. 2016ರಲ್ಲಿ ನ್ಯೂಝಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಎಂ.ಎಸ್. ಧೋನಿ ನನಗೆ ಬೌಲಿಂಗ್‌ಗೆ ಅವಕಾಶ ನೀಡುವ ನಿರ್ಧಾರ ಕೈಗೊಂಡ ಬಳಿಕ ವೃತ್ತಿಜೀವನದಲ್ಲಿ ಸಂಪೂರ್ಣ ಬದಲಾವಣೆಯಾ ಗಿದೆ’’ ಎಂದು 31ರ ಹರೆಯದ ಜಾಧವ್ ಹಳೆ ನೆನಪನ್ನು ಬಿಚ್ಚಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News