ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ

Update: 2018-09-21 04:09 GMT

ಅಬುಧಾಬಿ, ಸೆ.21:ಏಶ್ಯ ಕಪ್ ಟೂರ್ನಮೆಂಟ್ ನ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಅಫ್ಘಾನಿಸ್ತಾನ 136 ರನ್ ಗಳ ಭರ್ಜರಿ ಜಯ ಗಳಿಸಿದೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 256 ರನ್ ಗಳ ಸವಾಲನ್ನು ಪಡೆದ ಬಾಂಗ್ಲಾ 42.1 ಓವರ್ ಗಳಲ್ಲಿ 119 ರನ್ ಗಳಿಗೆ ಆಲೌಟಾಗಿದೆ.

ಬಾಂಗ್ಲಾದ ಶಾಕಿಬ್ ಅಲ್ ಹಸನ್ (32), ಮಹ್ಮುದುಲ್ಲಾ (27) ಮತ್ತು ಮೊಸಾದೆಕ್ ಹುಸೈನ್(ಔಟಾಗದೆ 26) ಎರಡಂಕೆಯ ಸ್ಕೋರ್ ದಾಖಲಿಸಿದರು.

ಅಫ್ಘಾನಿಸ್ತಾನದ ರಶೀದ್ ಖಾನ್(13ಕ್ಕೆ 2), ಮುಜೀಬ್ ರ್ರಹ್ಮಾನ್(22ಕ್ಕೆ 2), ಗುಲ್ಬಾದಿನ್ ನೈಬ್(30ಕ್ಕೆ 2), ಅಫ್ತಾಬ್ ಆಲಮ್(11ಕ್ಕೆ 1), ಮುಹಮ್ಮದ್ ನಬಿ(24ಕ್ಕೆ 1) ಮತ್ತು ರಹ್ಮತ್ ಶಾ(7ಕ್ಕೆ 1) ದಾಳಿಗೆ ಸಿಲುಕಿದ ಬಾಂಗ್ಲಾ ಬೇಗನೇ ಇನಿಂಗ್ಸ್ ಮುಗಿಸಿತು.

 ಟಾಸ್ ಜಯಿಸಿದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 255 ರನ್ ಕಲೆ ಹಾಕಿತು. ಆಲ್ ರೌಂಡರ್ ರಶೀದ್ ಖಾನ್ ಬಿರುಸಿನ ಬ್ಯಾಟಿಂಗ್(ಔಟಾಗದೆ 57,32 ಎಸೆತ) ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಹಶ್ಮತುಲ್ಲಾ ಶಾಹಿದಿ ತಾಳ್ಮೆಯ ಅರ್ಧಶತಕದ(58,92 ಎಸೆತ) ನೆರವಿನಿಂದ ಅಫ್ಘಾನಿಸ್ತಾನ ತಂಡ ಕಠಿಣ  ಸವಾಲು ನೀಡಿತ್ತು.

ಅಫ್ಘಾನ್ ಎರಡನೇ ಓವರ್‌ನಲ್ಲಿ ಆರಂಭಿಕ ಆಟಗಾರ ಇನ್ಸಾವುಲ್ಲಾಹ್(8) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಇನ್ನೋರ್ವ ಆರಂಭಿಕ ಆಟಗಾರ ಮುಹಮ್ಮದ್ ಶಾಝಾದ್(37,47 ಎಸೆತ,4 ಬೌಂಡರಿ) ಹಶ್ಮತುಲ್ಲಾ ಶಾಹಿದಿ(58,92 ಎಸೆತ, 3 ಬೌಂಡರಿ) ಅವರೊಂದಿಗೆ 3ನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಅಫ್ಘಾನ್ 160 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಆಗ 8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 95 ರನ್ ಸೇರಿಸಿದ ರಶೀದ್(57,32 ಎಸೆತ, 8 ಬೌಂಡರಿ,1ಸಿಕ್ಸರ್)ಹಾಗೂ ಗುಲ್ಬದಿನ್ ನೈಬ್(ಔಟಾಗದೆ 42, 38ಎಸೆತ, 5 ಬೌಂಡರಿ)ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಬಾಂಗ್ಲಾದ ಪರ ಶಾಕಿಬ್ ಅಲ್ ಹಸನ್(42ಕ್ಕೆ4) ಯಶಸ್ವಿ ಬೌಲರ್ ಎನಿಸಿಕೊಂಡರು. ಅಬು ಹೈದರ್(50ಕ್ಕೆ2)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News