ಭಾರತಕ್ಕೆ ಭರ್ಜರಿ ಜಯ: ಧವನ್, ರೋಹಿತ್ ಶತಕ

Update: 2018-09-23 18:32 GMT

 ದುಬೈ, ಸೆ.23: ಪಾಕಿಸ್ತಾನ ವಿರುದ್ಧ ಏಶ್ಯಕಪ್ ಸೂಪರ್ -4 ಹಂತದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

   ದುಬೈ ಇಂಟರ್ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 238 ರನ್‌ಗಳ ಸವಾಲನ್ನು ಪಡೆದ ಭಾರತ ನಾಯಕ ರೋಹಿತ್ ಶರ್ಮ ಮತ್ತು ಆರಂಭಿಕ ದಾಂಡಿಗ ಶಿಖರ್ ಧವನ್ ಶತಕದ ನೆರವಿನಲ್ಲಿ 39.3 ಓವರ್ ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿ ಗೆಲುವಿನ ದಡ ಸೇರಿತು.

ಧವನ್ 109ನೇ ಏಕದಿನ ಪಂದ್ಯದಲ್ಲಿ 95 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 15ನೇ ಶತಕ ದಾಖಲಿಸಿದರು. ರೋಹಿತ್ 187ನೇ ಏಕದಿನ ಪಂದ್ಯದಲ್ಲಿ 19ನೇ ಶತಕ ಪೂರ್ಣಗೊಳಿಸಿದರು. ರೋಹಿತ್ 106 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಶತಕ ತಲುಪಿದರು.

ಧವನ್ ಮತ್ತು ರೋಹಿತ್ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದರು. ಧವನ್ 114 ರನ್ (100ಎ, 16ಬೌ,2 ಸಿ) ಗಳಿಸಿ ರನೌಟಾದರು.

ರೋಹಿತ್ ಶರ್ಮ ಔಟಾಗದೆ 111 ರನ್ (119ಎ, 7ಬೌ,4ಸಿ) ಮತ್ತು ಅಂಬಟಿ ರಾಯುಡು ಔಟಾಗದೆ 12 ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಆಲ್‌ರೌಂಡರ್ ಶುಐಬ್ ಮಲಿಕ್ ನೀಡಿದ ಉಪಯುಕ್ತ 78 ರನ್ (90ಎ, 4ಬೌ,2ಸಿ) ಮತ್ತು ನಾಯಕ ಸರ್ಫರಾಝ್ ಅಹ್ಮದ್ 44 ರನ್(66ಎ, 2ಬೌ) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 237 ರನ್ ದಾಖಲಿಸಿತು.

,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News