ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪತ್ನಿ ಆರೋಪಕ್ಕೆ ಉತ್ತರಿಸಿ : ಗುಜರಾತ್ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ

Update: 2018-09-24 11:34 GMT

ಹೊಸದಿಲ್ಲಿ,ಸೆ.24 : ಇತ್ತೀಚೆಗೆ ಬಂಧಿಸಲ್ಪಟ್ಟಿರುವ ಗುಜರಾತ್ ರಾಜ್ಯದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸುಪ್ರೀಂಕೋರ್ಟಿಗೆ ಅಪೀಲು ಸಲ್ಲಿಸದಂತೆ ತಡೆಯಲಾಗಿದೆ ಎಂದು ಅವರ ಪತ್ನಿಯ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರಕಾರಕ್ಕೆ ಹೇಳಿದೆ.

"ಇದು ನಿಜವಾಗಿದ್ದರೆ ಒಂದು ಗಂಭೀರ ಆರೋಪವಾಗಿದೆ'' ಎಂದು ಸುಪ್ರೀಂ ಕೋರ್ಟ್ ಹೇಳಿದೆ. "ಸಾಮಾನ್ಯವಾಗಿ ಆರೋಪಿಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ. ಆದರೆ ಈ ಪ್ರಕರಣದಲ್ಲಿ  ಅವರ ಪತ್ನಿ ಅಪೀಲು ಸಲ್ಲಿಸಿದ್ದಾರೆ. ಒಬ್ಬ ನಾಗರಿಕ ಗಂಭೀರ ಆರೋಪ ಹೊರಿಸುತ್ತಿರುವಾಗ ರಾಜ್ಯ ಪ್ರತಿಕ್ರಿಯೆ ನೀಡಬೇಕು,'' ಎಂದಿದೆ.

ಶುಕ್ರವಾರದೊಳಗಡೆ ಉತ್ತರ ನೀಡುವುದಾಗಿ ಗುಜರಾತ್ ಸರಕಾರದ ಪರ ವಕೀಲ, ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿದರು. ಮುಂದಿನ ವಿಚಾರಣೆ ಅಕ್ಟೋಬರ್ 4ರಂದು ನಡೆಯಲಿದೆ.

22 ವರ್ಷ ಹಳೆಯ ಘಟನೆಗೆ ಸಂಬಂಧಿಸಿದಂತೆ ಸಂಜೀವ್ ಭಟ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News