ದ್ರಾವಿಡ್ ದಾಖಲೆ ಮುರಿದ ಧೋನಿ

Update: 2018-09-24 18:56 GMT

ದುಬೈ, ಸೆ.24: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರವಿವಾರ ಪಾಕಿಸ್ತಾನ ವಿರುದ್ಧ ಏಶ್ಯಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಆಡುವ ಮೂಲಕ ಗರಿಷ್ಠ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ದಾಖಲೆಯನ್ನು ಧೋನಿ ಮುರಿದಿದ್ದಾರೆ. ದ್ರಾವಿಡ್ 504 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಧೋನಿ 505ನೇ ಪಂದ್ಯ ಆಡಿರುವ ಆಟಗಾರ ಎನಿಸಿಕೊಂಡಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 664 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರ ಬಳಿಕ ಗರಿಷ್ಠ ಪಂದ್ಯಗಳನ್ನು ಆಡಿರುವ ದಾಖಲೆಯನ್ನು ಧೋನಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. 90 ಟೆಸ್ಟ್‌ಗಳನ್ನು ಆಡಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಿರುವ ಧೋನಿ 322 ಏಕದಿನ ಮತ್ತು 93 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ತೆಂಡುಲ್ಕರ್ 200 ಟೆಸ್ಟ್, 463 ಏಕದಿನ ಮತ್ತು 1 ಟ್ವೆಂಟಿ -20 ಪಂದ್ಯಗಳಲ್ಲಿ ಆಡಿದ್ದಾರೆ. ದ್ರಾವಿಡ್ 163 ಟೆಸ್ಟ್, 340 ಏಕದಿನ, 1 ಟ್ವೆಂಟಿ-20 ಪಂದ್ಯ ಆಡಿದ್ದಾರೆ. ಮುಹಮ್ಮದ್ ಅಝರುದ್ದೀನ್ 433 ಪಂದ್ಯ(99 ಟೆಸ್ಟ್, 334ಏಕದಿನ), ವಿರಾಟ್ ಕೊಹ್ಲಿ 344 ಪಂದ್ಯ(71ಟೆಸ್ಟ್, 211 ಏಕದಿನ, 62 ಟ್ವೆಂಟಿ) ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News