ಚರ್ಚ್‌ಗೆ 1.23 ಕೋಟಿ ರೂ. ದಂಡ !

Update: 2018-09-27 06:00 GMT

ಬೀಜಿಂಗ್, ಸೆ. 26: ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಹೊಸ ನಿರ್ಬಂಧಗಳನ್ನು ಟೀಕಿಸಿರುವುದಕ್ಕಾಗಿ ಚೀನಾದ ಅಧಿಕಾರಿಗಳು ಕ್ರೈಸ್ತ ಚರ್ಚೊಂದನ್ನು ಮುಚ್ಚಿದ್ದಾರೆ ಹಾಗೂ 12 ಲಕ್ಷ ಯುವಾನ್ (ಸುಮಾರು 1.23 ಕೋಟಿ ರೂಪಾಯಿ) ದಂಡ ವಿಧಿಸಿದ್ದಾರೆ.

ಝುಯಾನ್ ಚರ್ಚ್ ಚೀನಾದ ಅತಿ ದೊಡ್ಡ ಅನಧಿಕೃತ ಪ್ರೊಟೆಸ್ಟಂಟ್ ಚರ್ಚ್ ಆಗಿತ್ತು. ಅದನ್ನು ಈ ತಿಂಗಳ ಆದಿ ಭಾಗದಲ್ಲಿ ಮುಚ್ಚಲಾಗಿತ್ತು.

 ಈಗ ಬೀಜಿಂಗ್ ಮುನಿಸಿಪಲ್ ಪ್ರಾಧಿಕಾರವು, ಚರ್ಚ್‌ಗೆ ಹಿಂದಿನ ಬಾಡಿಗೆ 8 ಲಕ್ಷ ಯುವಾನ್ ಪಾವತಿಸುವಂತೆ ಸೂಚಿಸಿದೆ.

ಇದರ ಜೊತೆಗೆ ಇನ್ನೂ 4 ಲಕ್ಷ ಯುವಾನ್ ಮೊತ್ತವನ್ನು ಇತರ ವೆಚ್ಚಗಳಿಗೆ ಪಾವತಿಸುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News