ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ

Update: 2018-09-28 11:57 GMT

ಜಕಾರ್ತ,ಸೆ.28 : ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಶುಕ್ರವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದೇ ಪ್ರದೇಶದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿ ಹಲವು ಮನೆಗಳು ಧರಾಶಾಹಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದರೂ ನಂತರ ಅದನ್ನು ವಾಪಸ್ ಪಡೆದುಕೊಳ್ಳಲಾಯಿತು. ಆದರೂ ಲಘು ಕಂಪನಗಳು ಸಂಭವಿಸುತ್ತಲೇ ಇರುವುದರಿಂದ ಜನರು ಎಚ್ಚರಿಕೆಯಿಂದಿರುವಂತೆ ಹೇಳಲಾಗಿದೆ.

“ಜನರು ಸುರಕ್ಷಿತ ಸ್ಥಳಗಳಲ್ಲಿರಬೇಕು, ಹಾನಿಗೀಡಾದ ಕಟ್ಟಡಗಳಿಂದ ದೂರವಿರಬೇಕು'' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜನ್ಸಿಯ ವಕ್ತಾರ ಪುರ್ವೊ ನುಗ್ರುಹೊ ಹೇಳಿದ್ದಾರೆ.

ಭೂಕಂಪದಿಂದಾಗಿ ಒಬ್ಬ ವ್ಯಕ್ತಿ ಸಾವಿಗೀಡಾಗಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ, ಹಲವಾರು ಮನೆಗಳು ಉರುಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಎರಡನೇ ಕಂಪನದ ತೀವ್ರತೆ 7.7ರಷ್ಟಿತ್ತು ಎಂದು ಆರಂಭದಲ್ಲಿ ಹೇಳಿದ ಅಮೆರಿಕಾದ ಭೂಗೋಳ ಸಮೀಕ್ಷಾ ಇಲಾಖೆ ನಂತರ ಭೂಕಂಪದ ತೀವ್ರತೆ 7.5ರಷ್ಟಿತ್ತು ಎಂದು ತಿಳಿಸಿದೆ.

ಇಂದು ಭೂಕಂಪ ಸಂಭವಿಸಿದ ಸ್ಥಳದಿಂದ ನೂರಾರು ಕಿಲೋಮೀಟರ್ ದೂರದ ಲೊಂಬೊಕ್ ದ್ವೀಪದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 500 ಜನರು ಸಾವಿಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News