ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆಯದೆ ಇದ್ದಲ್ಲಿ ಬಿಜೆಪಿ ತನಿಖೆಗೆ ಹೆದರುವ ಅಗತ್ಯವಿಲ್ಲ: ಕಮಲ್ ಹಾಸನ್

Update: 2018-09-29 09:55 GMT

ಚೆನ್ನೈ, ಸೆ.29: ರಫೇಲ್ ಒಪ್ಪಂದದ ಕುರಿತಂತೆ ಕೇಳಲಾಗುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ವಿಚಾರದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಕಮಲ್, “ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಬಗ್ಗೆ ಹಲವು ಸಂಶಯಗಳು ಏಳುತ್ತಿರುವುದರಿಂದ ಸೂಕ್ತ ತನಿಖೆಯೊಂದೇ ಇದಕ್ಕೆ ಪರಿಹಾರವಾಗಿದೆ. ಒಬ್ಬರು ನಿರಪರಾಧಿಗಳೆಂದಾದಲ್ಲಿ ಭಯ ಪಡಲು ಏನೂ ಇಲ್ಲ”' ಎಂದು ಕಮಲ್ ಹೇಳಿದರು.

ಇಂಧನ ದರ ಏರಿಕೆಯ ಬಗ್ಗೆಯೂ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಮಲ್ ಇದಕ್ಕೆ ಬಿಜೆಪಿಯನ್ನು ದೂರಿದ್ದಾರೆ. ಇಂಧನ ದರ ಏರಿಕೆಯಿಂದ ಇತರ ಅಗತ್ಯ ವಸ್ತುಗಳ ಬೆಲೆಗಳಲ್ಲೂ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದರು.

“ಇಂಧನ ಬೆಲೆಯೇರಿಕೆಗೆ ರಾಜ್ಯ ಸರಕಾರಕ್ಕಿಂತ ಕೇಂದ್ರ ಸರಕಾರವೇ ಕಾರಣ. ಬಿಜೆಪಿ ವಿಪಕ್ಷದಲ್ಲಿದ್ದಾಗ ಇಂಧನ ಬೆಲೆಯೇರಿಕೆ ವಿರೋಧಿಸಿ ಅದು ಪ್ರತಿಭಟಿಸಿತ್ತು. ಈಗ ಅದು ಏಕೆ ಮೌನವಾಗಿದೆ ?'' ಎಂದು  ಕಮಲ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News