ಲಾತೂರ್ ಭೂಕಂಪ: 20,000 ಜನರ ಮೃತ್ಯು

Update: 2018-09-29 18:45 GMT

1898: ನ್ಯೂಯಾರ್ಕ್ ಪಟ್ಟಣ ಈ ದಿನ ಸ್ಥಾಪನೆಯಾ ಯಿತು.

1939: ಪೋಲೆಂಡ್‌ನ ವಿಭಜನೆಗೆ ರಶ್ಯಾ ಮತ್ತು ಜರ್ಮನಿ ಒಪ್ಪಿಗೆ ಸೂಚಿಸಿದವು.

1950: ಅಂತರ್‌ರಾಷ್ಟ್ರೀಯ ಗಗನಯಾತ್ರಿಗಳ ಒಕ್ಕೂಟದ ಪ್ರಥಮ ಸಭೆ ಈ ದಿನ ಪ್ಯಾರಿಸ್‌ನಲ್ಲಿ ಆರಂಭವಾಯಿತು.

1972: ದಕ್ಷಿಣ ಆಫ್ರಿಕಾದಲ್ಲಿ ಪ್ರಯಾಣಿಕ ರೈಲೊಂದು ಹಳಿ ತಪ್ಪಿದ ಪರಿಣಾಮ 48 ಜನರು ಸಾವನ್ನಪ್ಪಿದ ವರದಿಯಾಗಿದೆ.

1993: ಈ ದಿನ ಮುಂಜಾನೆಯ ಸಿಹಿನಿದ್ದೆ ಯಲ್ಲಿದ್ದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಜನರಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು ಭೂಕಂಪ. ಮುಂಜಾವಿನ ಸುಮಾರು 3:56ರ ಸಮಯದಲ್ಲಿ ಲಾತೂರ್ ಜಿಲ್ಲೆಯ ಕಿಲ್ಲಾರಿಯನ್ನು ಕೇಂದ್ರವಾಗಿಸಿ ಸಂಭವಿಸಿದ ಭೀಕರ ಭೂಕಂಪನವು ಲಾತೂರ್ ಜಿಲ್ಲೆ ಮತ್ತು ಉಸ್ಮಾನಾಬಾದ್ ಜಿಲ್ಲೆಗಳಿಗೆ ಹಬ್ಬಿತ್ತು. ಈ ಸಂದರ್ಭದಲ್ಲಿ ಸುಮಾರು 20,000 ಜನರು ಪ್ರಾಣ ಕಳೆದುಕೊಂಡರು. ಸುಮಾರು 30,000 ಜನರು ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ 7.2ರಷ್ಟು ಕಂಪನಾಂಕವನ್ನು ಈ ಭೂಕಂಪ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ