'ರಕ್ತ ಕೊಟ್ಟೇವು ಪಿಂಚಣಿ ಬಿಡೆವು' ಅಭಿಯಾನ
Update: 2018-10-01 19:53 IST
ಬೆಂಗಳೂರು, ಅ.1: ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘವು ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಅಭಿಯಾನದ ಮೂಲಕ ಸ್ವಾತಂತ್ರ ಉದ್ಯಾನವನದಲ್ಲಿ ನಾಳೆ(ಅ.3) ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಶಾಂತಾರಾಮ ಮಾತನಾಡಿ, ಕಾರ್ಯಕ್ರಮದಲ್ಲಿ 50ಸಾವಿರ ಎನ್‌ಪಿಎಸ್ ನೌಕರರು ಭಾಗವಹಿಸಲಿದ್ದು, ಪಿಂಚಣಿ ಎಂಬುದು ನೌಕರರ ಕುಟುಂಬದ ಊರುಗೋಲು ನಿಮ್ಮ ಉಪಸ್ಥಿತಿ, ನಿಮ್ಮ ನಿವೃತ್ತಿ ಬದುಕಿನ ದಾರಿದೀಪವಾಗಬಲ್ಲದು ಎಂದು ಎನ್‌ಪಿಎಸ್ ನೌಕರರಲ್ಲಿ ಮನವಿ ಮಾಡಿದರು.