ಟೋಕಿಯೊಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ ‘ಟ್ರಾಮಿ‘

Update: 2018-10-01 16:49 GMT

ಟೋಕಿಯೊ, ಅ. 1: ಪ್ರಬಲ ಚಂಡಮಾರುತ ‘ಟ್ರಾಮಿ’ ಸೋಮವಾರ ಬೆಳಗ್ಗೆ ಜಪಾನ್ ರಾಜಧಾನಿ ಟೋಕಿಯೊಗೆ ಅಪ್ಪಳಿಸಿದೆ. ತೀವ್ರ ಬಿರುಗಾಳಿಗೆ ಸಿಲುಕಿದ ಮರಗಳು ನೆಲಕ್ಕೆ ಉರುಳಿವೆ ಹಾಗೂ ನಗರದಾದ್ಯಂತ ಅವಶೇಷಗಳು ಹರಡಿವೆ.

ರೈಲು ಹಳಿಗಳಿಗೆ ಮರಗಳು ಉರುಳಿದ್ದು, ರೈಲುಗಳ ಸಂಚಾರ ರೈಲುಗಳ ಸಂಚಾರ ನಿಂತಿವೆ ಹಾಗೂ ಸಾವಿರಾರು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ.

ಚಂಡಮಾರುತದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದಾರೆ.

‘ಟ್ರಾಮಿ’ ಚಂಡಮಾರುತ ರವಿವಾರ ಸಂಜೆ ಪಶ್ಚಿಮ ಜಪಾನ್‌ಗೆ ಅಪ್ಪಳಿಸಿತು ಹಾಗೂ ಉತ್ತರದ ತುದಿಯ ಪ್ರಮುಖ ದ್ವೀಪ ಹೊಕ್ಕಾಯಿಡೊದಲ್ಲಿ ಭಾರೀ ಮಳೆ ಸುರಿಯಿತು ಹಾಗೂ ಭೂಕುಸಿತಗಳು ಸಂಭವಿಸಿದವು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಇದೇ ದ್ವೀಪದಲ್ಲಿ ಕಳೆದ ತಿಂಗಳು ಪ್ರಬಲ ಭೂಕಂಪ ಸಂಭವಿಸಿತ್ತು.

ಭೂಕಂಪದಿಂದಾಗಿ ಕನಿಷ್ಠ 130 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಟಿವಿ ‘ಎನ್‌ಎಚ್‌ಕೆ’ ವರದಿ ಮಾಡಿದೆ.

ಸುಮಾರು 4 ಲಕ್ಷ ಮನೆಗಳ ವಿದ್ಯುತ್ ಸಂಚಾರ ಕಡಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News