ಬೆಂಗಳೂರು: ನಿವೃತ್ತ ಡಿಜಿ, ಐಜಿಪಿ ಸಂಬಂಧಿಯ ಕಾರು ಕಳವು; ಇಬ್ಬರ ಬಂಧನ
Update: 2018-10-02 19:33 IST
ಬೆಂಗಳೂರು, ಅ.2: ನಿವೃತ್ತ ಡಿಜಿ, ಐಜಿಪಿ ಸಂಬಂಧಿಯ ಕಾರು ಕಳವು ಮಾಡಿದ್ದ ಆರೋಪದ ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶ ಮೂಲದ ಸತೀಶ್‌ರೆಡ್ಡಿ ಹಾಗೂ ತೇಜಸ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಡಿಜಿ, ಐಜಿಪಿ ಶ್ರೀನಿವಾಸಲು ಅವರ ಅಳಿಯ ಕೃಷ್ಣಸ್ವಾಮಿ ಅವರು ವಾಸವಿರುವ ಇಂದಿರಾನಗರದ ಮನೆಯಿಂದ ಕಾರನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.