ಗಮನ ಬೇರೆಡೆ ಸೆಳೆದು 3 ಲಕ್ಷ ನಗದು ದರೋಡೆ
Update: 2018-10-02 19:35 IST
ಬೆಂಗಳೂರು, ಅ.2: ಬ್ಯಾಂಕ್‌ನಿಂದ ಹಣ ಪಡೆದು ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಗಮನ ಸೆಳೆದ ದರೋಡೆಕೋರರು, 3 ಲಕ್ಷ ಹಣದ್ದ ಬ್ಯಾಗನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪುರುಷೋತ್ತಮ್ ಎಂಬುವವರು ಮೂರು ದಿನಗಳ ಹಿಂದೆ ಕೆನರಾ ಬ್ಯಾಂಕ್‌ನಿಂದ 3 ಲಕ್ಷ ರೂ. ಹಣ ಪಡೆದುಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಇವರನ್ನು ಹಿಂಬಾಲಿಸಿ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಮಾರ್ಗ ಮಧ್ಯೆ ನಿಮ್ಮ ಗಾಡಿ ಪಂಕ್ಚರ್ ಆಗಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆದು ಪುರುಷೋತ್ತಮ್ ಅವರ ಬೈಕ್ ಅನ್ನು ತಡೆದಿದ್ದಾರೆ.
ಪುರುಷೋತ್ತಮ್ ರಸ್ತೆ ಬದಿ ಬೈಕ್ ನಿಲ್ಲಿಸಿ ಚಕ್ರವನ್ನು ಪರಿಶೀಲಿಸುತ್ತಿದ್ದಂತೆ ದುಷ್ಕರ್ಮಿಗಳು ಗಾಡಿಯಲ್ಲಿ ಹಣವಿದ್ದ ಬ್ಯಾಗನ್ನು ತೆಗೆದುಕೊಂಡು ಪರಾರಿ ಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.