ಪೃಥ್ವಿಯನ್ನು ಸೆಹ್ವಾಗ್‌ಗೆ ಹೋಲಿಸಬೇಡಿ: ಗಂಗುಲಿ

Update: 2018-10-05 18:36 GMT

ಕೋಲ್ಕತಾ, ಅ.5: ‘‘ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿರುವ ಪೃಥ್ವಿ ಶಾ ಸಾಧನೆ ‘ಅತ್ಯಪೂರ್ವ’ ಎಂದು ಬಣ್ಣಿಸಿರುವ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ, ಯುವ ಆಟಗಾರನನ್ನು ವೀರೇಂದ್ರ ಸೆಹ್ವಾಗ್‌ಗೆ ಹೋಲಿಸುವುದು ಸರಿಯಲ್ಲ. ಶಾಗೆ ವಿಶ್ವದೆಲ್ಲೆಡೆ ಕ್ರಿಕೆಟ್ ಪ್ರವಾಸಕೈಗೊಳ್ಳಲು ಅವಕಾಶ ನೀಡಬೇಕು. ಅವರು ಎಲ್ಲ ಕಡೆಯೂ ರನ್ ಗಳಿಸಬೇಕು’’ ಎಂದು ಹೇಳಿದ್ದಾರೆ.

‘‘ಶಾರನ್ನು ಸೆಹ್ವಾಗ್‌ಗೆ ಹೋಲಿಸುವುದು ಸರಿಯಲ್ಲ. ಸೆಹ್ವಾಗ್ ಓರ್ವ ಅಪ್ಪಟ ಆಟಗಾರ. ಶಾಗೆ ವಿಶ್ವದೆಲ್ಲೆಡೆ ತೆರಳಿ ಆಡಲು ಅವಕಾಶ ನೀಡಬೇಕು. ಶಾ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕ ನೆಲದಲ್ಲಿ ರನ್ ಗಳಿಸುವ ವಿಶ್ವಾಸ ನನಗಿದೆ. ಆದರೆ, ಅವರನ್ನು ಸೆಹ್ವಾಗ್‌ಗೆ ಹೋಲಿಕೆ ಮಾಡಬೇಡಿ’’ ಎಂದು ಕಿವಿಮಾತು ಹೇಳಿದರು. ‘‘ಗುರುವಾರ ಶಾ ಪಾಲಿಗೆ ಸ್ಮರಣೀಯ ದಿನ. ಅವರು ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದಾರೆ...ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ದುಲೀಪ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲೂ ಅವರು ಶತಕ ದಾಖಲಿಸಿದ್ದಾರೆ. ಇದೀಗ ಭಾರತದ ಪರವೂ ಶತಕ ದಾಖಲಿಸಿದ್ದಾರೆ’’ ಎಂದು 1996ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ತನ್ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಗಂಗುಲಿ ಹೇಳಿದರು.

 ‘‘ನನಗೆ ರಣಜಿ ಟ್ರೋಫಿಯ ಪಾದಾರ್ಪಣೆ ಪಂದ್ಯದಲ್ಲೇ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ,ದುಲೀಪ್ ಟ್ರೋಫಿಯ ಮೊದಲ ಪಂದ್ಯ ಹಾಗೂ ಟೆಸ್ಟ್‌ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News