ಮೊದಲ ಟೆಸ್ಟ್ : ಪ್ರಥಮ ಇನಿಂಗ್ಸ್‌ನಲ್ಲಿ ವಿಂಡೀಸ್ 181ಕ್ಕೆ ಆಲೌಟ್

Update: 2018-10-06 06:18 GMT

ರಾಜ್‌ಕೋಟ್, ಅ,6: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನವಾಗಿರುವ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ 48 ಓವರ್‌ಗಳಲ್ಲಿ 181 ರನ್ ಗಳಿಗೆ ಆಲೌಟಾಗಿದೆ.

  ಟೆಸ್ಟ್‌ನ ಎರಡನೇ ದಿನವಾಗಿರುವ ಶುಕ್ರವಾರ ದಿನದಾಟದಂತ್ಯಕ್ಕೆ ವೆಸ್ಟ್‌ಇಂಡೀಸ್ 29 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 94 ರನ್ ಗಳಿಸಿತ್ತು. ಈ ಮೊತ್ತಕ್ಕೆ 87 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.

ರಾಸ್ಟನ್ ಚೇಸ್ ಔಟಾಗದೆ 27ರನ್ ಮತ್ತು ಕೀಮೊ ಪಾಲ್ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅವರು ಬ್ಯಾಟಿಂಗ್ ಮುಂದುವರಿಸಿ 7ನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನೀಡಿದರು.

ರಾಸ್ಟನ್ ಚೇಸ್(53) ಅರ್ಧಶತಕ ದಾಖಲಿಸಿದರು ಮತ್ತು ಪಾಲ್(47) ಅವರು 3 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಭಾರತದ ರವಿಚಂದ್ರನ್ ಅಶ್ವಿನ್37ಕ್ಕೆ 4 ಮುಹಮ್ಮದ್ ಶಮಿ 22ಕ್ಕೆ 2 ವಿಕೆಟ್, ಉಮೇಶ್ ಯಾದವ್ , ರವೀಂದ್ರ ಜಡೇಜ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

 ಭಾರತ 149.5 ಓವರ್‌ಗಳಲ್ಲಿ 9ವಿಕೆಟ್ ನಷ್ಷದಲ್ಲಿ 649 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ ಭಾರತ 468 ರನ್ ಗಳ ಮುನ್ನಡೆ ಸಾಧಿಸಿದೆ.

 ಫಾಲೋ ಆನ್ ಅನುಭವಿಸಿರುವ ವೆಸ್ಟ್‌ಇಂಡೀಸ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 9 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 33 ರನ್ ಗಳಿಸಿದೆ. ನಾಯಕ ಹಾಗೂ ಆರಂಭಿಕ ದಾಂಡಿಗ ಕ್ರೇಗ್ ಬ್ರಾಥ್ ವೇಟ್ (10) ಔಟಾಗಿದ್ದಾರೆ. ಅಶ್ವಿನ್ ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News