ಮೊದಲ ಟೆಸ್ಟ್ : ಭಾರತಕ್ಕೆ ಇನಿಂಗ್ಸ್ , 272 ರನ್ ಜಯ

Update: 2018-10-06 09:45 GMT

  ರಾಜ್‌ಕೋಟ್, ಅ,6: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಇನಿಂಗ್ಸ್  ಹಾಗೂ 272 ರನ್ ಗಳ ಜಯ ಗಳಿಸಿದೆ

ಮೂರನೇ ದಿನವಾಗಿರುವ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ 48 ಓವರ್‌ಗಳಲ್ಲಿ 181 ರನ್ ಗಳಿಗೆ ಮತ್ತು ಎರಡನೇ ಇನಿಂಗ್ಸ್ ನಲ್ಲಿ 50.5 ಓವರ್ ಗಳಲ್ಲಿ 196 ರನ್ ಗಳಿಗೆ ಆಲೌಟ್ ಮಾಡಿದ ಭಾರತ ಭರ್ಜರಿ ಜಯ ಗಳಿಸಿದೆ. ಐದು ದಿನಗಳ ಟೆಸ್ಟ್ ಪಂದ್ಯ ಎರಡೂವರೆ ದಿನಗಳಲ್ಲಿ ಮುಗಿದಿದೆ.

ಫಾಲೋ ಆನ್ ಅನುಭವಿಸಿದ ವೆಸ್ಟ್‌ಇಂಡೀಸ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕುಲ್ ದೀಪ್ ಯಾದವ್ (57ಕ್ಕೆ 5), ರವೀಂದ್ರ ಜಡೇಜ(35ಕ್ಕೆ 3) ಮತ್ತು ರವಿಚಂದ್ರನ್ ಅಶ್ವಿನ್ (71ಕ್ಕೆ 2) ದಾಳಿಗೆ ತತ್ತರಿಸಿ ಬೇಗನೇ ಎರಡನೇ ಇನಿಂಗ್ಸ್ ಮುಗಿಸಿದೆ. ವಿಂಡೀಸ್ ನ ಕೀರನ್ ಪೋವೆಲ್ (83) ಸ್ಕೋರ್ ದಾಖಲಿಸಿದರು.

  ಟೆಸ್ಟ್‌ನ ಎರಡನೇ ದಿನವಾಗಿರುವ ಶುಕ್ರವಾರ ದಿನದಾಟದಂತ್ಯಕ್ಕೆ ವೆಸ್ಟ್‌ಇಂಡೀಸ್ 29 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 94 ರನ್ ಗಳಿಸಿತ್ತು. ಶನಿವಾರ ಈ ಮೊತ್ತಕ್ಕೆ 87 ರನ್ ಸೇರಿಸುವಷ್ಟರಲ್ಲಿ 181 ರನ್ ಗಳಿಗೆ ಆಲೌಟಾಗಿತ್ತು.

 ರಾಸ್ಟನ್ ಚೇಸ್ ಔಟಾಗದೆ 27ರನ್ ಮತ್ತು ಕೀಮೊ ಪಾಲ್ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅವರು ಬ್ಯಾಟಿಂಗ್ ಮುಂದುವರಿಸಿ 7ನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನೀಡಿರು. ರಾಸ್ಟನ್ ಚೇಸ್(53) ಅರ್ಧಶತಕ ದಾಖಲಿಸಿದರು ಮತ್ತು ಪಾಲ್(47) ಅವರು 3 ರನ್‌ನಿಂದ ಅರ್ಧಶತಕ ವಂಚಿತಗೊಂಡರು.

 ಭಾರತದ ರವಿಚಂದ್ರನ್ ಅಶ್ವಿನ್37ಕ್ಕೆ 4 ಮುಹಮ್ಮದ್ ಶಮಿ 22ಕ್ಕೆ 2 ವಿಕೆಟ್, ಉಮೇಶ್ ಯಾದವ್ , ರವೀಂದ್ರ ಜಡೇಜ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲ ಭಾರತ 149.5 ಓವರ್‌ಗಳಲ್ಲಿ 9ವಿಕೆಟ್ ನಷ್ಷದಲ್ಲಿ 649 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News