ಭಾರತಕ್ಕೆ ಲಕ್ಷ್ಯಸೇನ್ ನಾಯಕ

Update: 2018-10-06 18:57 GMT

ಹೊಸದಿಲ್ಲಿ, ಅ.6: ಕೆನಡಾದ ಮರ್ಖಮ್‌ನಲ್ಲಿ ನ.5 ರಿಂದ 18ರ ತನಕ ನಡೆಯುವ ಬಿಡಬ್ಲುಎಫ್ ವರ್ಲ್ಡ್‌ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಉದಯೋನ್ಮುಖ ಏಶ್ಯನ್ ಜೂನಿಯರ್ ಚಾಂಪಿಯನ್ ಲಕ್ಷ ಸೇನ್ ಭಾರತದ ಅಭಿಯಾನದ ನೇತೃತ್ವವಹಿಸಲಿದ್ದಾರೆ.

13 ಬಾಲಕರು ಹಾಗೂ 11 ಬಾಲಕಿಯರ ಸಹಿತ 24 ಸದಸ್ಯರ ತಂಡ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ವಿಶ್ವದ ನಂ.5ನೇ ಆಟಗಾರ್ತಿ ವೈಷ್ಣವಿ ಬಾಲಕಿಯರ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

 ಸೆಪ್ಟಂಬರ್‌ನಲ್ಲಿ ಚಂಡಿಗಡ ಹಾಗೂ ಪಂಚಕುಲಾದಲ್ಲಿ ನಡೆದ ಸತತ ಎರಡು ಅಖಿಲ ಭಾರತ ರ್ಯಾಂಕಿಂಗ್ ಆಯ್ಕೆ ಟೂರ್ನಿಗಳಲ್ಲಿ ಗಳಿಸಿದ ರ್ಯಾಂಕಿಂಗ್ ಪಾಯಿಂಟ್ ಆಧಾರದಲ್ಲಿ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

 ಪುರುಷರ ಡಬಲ್ಸ್ ತಂಡವನ್ನು ಧುೃವ ಕಪಿಲ ಹಾಗೂ ಜಿ.ಕೃಷ್ಣ ಪ್ರಸಾದ್, ಮಹಿಳಾ ವಿಭಾಗದಲ್ಲಿ ಸಾಹಿತಿ ಬಂಡಿ ಹಾಗೂ ತನು ಶ್ರೀ ಮುನ್ನಡೆಸಲಿದ್ದಾರೆ. ಮಿಶ್ರ ಡಬಲ್ಸ್‌ನ್ನು ಕರ್ನಾಟಕದ ಸಾಯಿ ಕೃಷ್ಣ ಕುಮಾರ್ ಹಾಗೂ ಅಶ್ವಿನಿ ಭಟ್ ನಾಯಕರಾಗಿ ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News