ಭಾರತ ವಿರುದ್ಧದ ಏಕದಿನ, ಟ್ವೆಂಟಿ-20 ಸರಣಿಗೆ ವೆಸ್ಟ್‌ಇಂಡೀಸ್ ತಂಡ ಆಯ್ಕೆ

Update: 2018-10-09 05:35 GMT

ಹೊಸದಿಲ್ಲಿ, ಅ.8: ಭಾರತದಲ್ಲಿ ನಡೆಯಲಿರುವ ಏಕದಿನ ಮತ್ತು ಟ್ವೆಂಟಿ-20 ಪಂದ್ಯಗಳ ಸರಣಿಗೆ ವೆಸ್ಟ್‌ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್ ಕೀರನ್ ಪೊಲಾರ್ಡ್ ಮತ್ತು ಡರೆನ್ ಬ್ರಾವೊ ಟ್ವೆಂಟಿ -20 ತಂಡಕ್ಕೆ ವಾಪಸಾಗಿದ್ದಾರೆ.

ಬ್ರಾವೊ ಎರಡು ವರ್ಷಗಳ ವಿರಾಮದ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. ಇದೇ ವೇಳೆ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಸರಣಿಯಿಂದ ದೂರ ಉಳಿದಿದ್ದಾರೆ.

 ಪೊಲಾರ್ಡ್ ವರ್ಷಗಳ ಬಳಿಕ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆದಿದ್ದಾರೆ. ಕೋಲ್ಕತಾದಲ್ಲಿ ನ.4ರಂದು ಆರಂಭವಾಗಲಿರುವ 3 ಪಂದ್ಯಗಳ ಟಿ-20 ಸರಣಿಯಲ್ಲಿ ಅವರು ಅವಕಾಶ ಪಡೆದಿದ್ದಾರೆ. ‘‘ ಕ್ರಿಸ್ ಗೇಲ್ ಅವರು ಭಾರತ ಮತ್ತು ಬಾಂಗ್ಲಾ ವಿರುದ್ಧದ ಸರಣಿಗೆ ಲಭ್ಯರಿಲ್ಲ ’’ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಕೊರ್ಟ್ನಿ ಬ್ರಾವ್ನೆ ತಿಳಿಸಿದ್ದಾರೆ. 39ರ ಹರೆಯದ ಗೇಲ್ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಗೇಲ್ ಅವರು ಇಂಗ್ಲೆಂಡ್ ವಿರುದ್ಧದ ತವರು ಸರಣಿಗೆ ಮತ್ತು ವಿಶ್ವಕಪ್‌ಗೆ ಲಭ್ಯರಿದ್ದಾರೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಕೊರ್ಟ್ನಿ ಬ್ರಾವ್ನೆ ತಿಳಿಸಿದ್ದಾರೆ. ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಟ್ವೆಂಟಿ-20 ತಂಡದಲ್ಲಿದ್ದಾರೆ. ಕಾರ್ಲೊಸ್ ಬ್ರಾಥ್‌ವೈಟ್ ಏಕದಿನ ಸರಣಿಗಿಲ್ಲ. ಆದರೆ ಟ್ವೆಂಟಿ-20 ತಂಡವನ್ನು ಮುನ್ನಡೆಸುವರು.

ವೆಸ್ಟ್‌ಇಂಡೀಸ್ ತಂಡದಲ್ಲಿ ಇನ್ನೂ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡದಿರುವ ಮೂವರು ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಚಂದ್ರಪಾಲ್ ಹೇಮ್‌ರಾಜ್, ಆಲ್‌ರೌಂಡರ್ ಫ್ಯಾಬಿಯಾನ್ ಆ್ಯಲೆನ್‌ಮತ್ತು ವೇಗಿ ಒಶಾನೆ ಥಾಮಸ್ ಅವಕಾಶ ಪಡೆದಿದ್ದಾರೆ. 5 ಪಂದ್ಯಗಳ ಏಕದಿನ ಸರಣಿ ಗುವಾಹಟಿಯಲ್ಲಿ ಅಕ್ಟೋಬರ್ 21ರಂದು ಆರಂಭವಾಗಲಿದೆ.

ಟೀಮ್ ಇಂಡಿಯಾ ವಿರುದ್ಧ ರಾಜ್‌ಕೋಟ್‌ನಲ್ಲಿ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ ಇನಿಂಗ್ಸ್ ಮತ್ತು 272 ರನ್‌ಗಳ ಸೋಲು ಅನುಭವಿಸಿತ್ತು. ಎರಡನೇ ಟೆಸ್ಟ್ ಪಂದ್ಯ ಹೈದರಾಬಾದ್‌ನಲ್ಲಿ ಶುಕ್ರವಾರ ಆರಂಭವಾಗಲಿದೆ.

► ಏಕದಿನ ತಂಡ: ಜೇಸನ್ ಹೋಲ್ಡರ್(ನಾಯಕ), ಫ್ಯಾಬಿಯಾನ್ ಆ್ಯಲೆನ್, ಸುನೀಲ್ ಅಂಬ್ರಿಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮರಾಜ್, ಶಿಮ್ರಿನ್ ಹೆಟ್ಮೆಯರ್, ಶಾಯಿ ಹೋಪ್, ಅಲ್ಝಾರಿ ಜೋಸೆಫ್, ಎವಿನ್ ಲೂಯಿಸ್, ಆಶ್ಲೇ ನರ್ಸ್, ಕೀಮೊ ಪಾಲ್, ರೊವ್‌ಮಾನ್ ಪೊವೆಲ್, ಕೇಮರ್ ರೂಚ್, ಮರ್ಲಾನ್ ಸ್ಯಾಮುಯೆಲ್ಸ್, ಒಶಾನೆ ಥಾಮಸ್.

► ಟ್ವೆಂಟಿ-20 ಪಂದ್ಯ: ಕಾರ್ಲೊಸ್ ಬ್ರಾಥ್‌ವೈಟ್(ನಾಯಕ), ಫ್ಯಾಬಿಯನ್ ಆ್ಯಲೆನ್, ಡರೆನ್ ಬ್ರಾವೊ ಶಿಮ್ರಾನ್ ಹೆಟ್ಮೆಯರ್, ಎವಿನ್ ಲೂಯಿಸ್, ಒಬೆಡ್ ಮೆಕ್‌ಕೋಯ್, ಆಶ್ಲೇ ನರ್ಸ್, ಕೋಮೊ ಪಾಲ್, ಖ್ಯಾರ್ರಿ ಪಿರ್ರೆ, ಕಿರನ್ ಪೊಲಾರ್ಡ್,ರಾವ್‌ಮೆನ್ ಪೊವೆಲ್, ದಿನೇಶ್ ರಾಮ್‌ದಿನ್, ಆ್ಯಂಡ್ರೆ ರಸೆಲ್, ಶೆರ್ಫೆನೆ ರುಥರ್ಪೋರ್ಡ್, ಒಶಾನೆ ಥಾಮಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News