ಆಧಾರ್ ಸಂಬಂಧಿತ ವಿಷಯಗಳಿಗೆ ಒಂದೇ ಸೂರಿನಡಿ ಪರಿಹಾರ

Update: 2018-10-09 16:58 GMT

ಹೊಸದಿಲ್ಲಿ, ಅ.9: ಪಾಸ್‌ಪೋರ್ಟ್ ಸೇವಾಕೇಂದ್ರಗಳ ಮಾದರಿಯಲ್ಲೇ, ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರವು ಯೋಜನೆಯನ್ನು ಹಮ್ಮಿಕೊಂಡಿದೆ. 300ರಿಂದ 400 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯಲ್ಲಿ ದೇಶಾದ್ಯಂತ 53 ನಗರಗಳಲ್ಲಿ ಆಧಾರ್ ಸೇವಾ ಕೇಂದ್ರಗಳು ಸ್ಥಾಪನೆಯಾಗಲಿವೆ.

  ಪ್ರಸ್ತಾವಿತ ಆಧಾರ್ ಕೇಂದ್ರಗಳಲ್ಲಿ ಆಧಾರ್ ನೋಂದಣಿ,ಆಧಾರ್ ಗುರುತುಚೀಟಿಗಳನ್ನು ಅಪ್‌ಡೇಟ್ ಮಾಡುವುದು ಮತ್ತಿತರ ಚಟುವಟಿಕೆಗಳನ್ನು ನಡೆಸಲಿವೆ. ಆಧಾರ್ ಸಂಬಂಧಿತ ಸೇವೆಗಳನ್ನು ನೀಡುತ್ತಿರುವ ಸುಮಾರು 30 ಸಾವಿರಕ್ಕೂ ಅಧಿಕ ಬ್ಯಾಂಕ್‌ಗಳು ಹಾಗೂ ಅಂಚೆ ಕಚೇರಿಗಳು ಮತ್ತು ಸರಕಾರಿ ಕಚೇರಿಗಳಿಗೆ ಹೆಚ್ಚುವರಿಯಾಗಿ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.

ಆಧಾರ್ ಸೇವಾ ಕೇಂದ್ರಗಳು, ಸಾರ್ವಜನಿಕರು ಸೇವೆಗಳನ್ನು ಪಡೆಯುವುದಕ್ಕಾಗಿ ಸಮಾಯಾಕಾಶವನ್ನು ಮುಂಗಡ ಕಾದಿರಿಸುವ ಸೌಲಭ್ಯವನ್ನು ಕೂಡಾ ಒದಗಿಸಲಿವೆ.

 ಎಲ್ಲಾ ಆಧಾರ್ ಸೇವಾಕೇಂದ್ರಗಳು ದೇಶಾದ್ಯಂತ 53 ನಗರಗಳಲ್ಲಿ 2019ರ ಎಪ್ರಿಲ್‌ನೊಳಗೆ ಕಾರ್ಯಾರಂಭಿಸಲಿವೆಯೆಂದು ಅವರು ಹೇಳಿದ್ದಾರೆ.

 ಪ್ರತಿದಿನವೂ ಸುಮಾರು 4 ಲಕ್ಷ ಮಂದಿ ತಮ್ಮ ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ ಹಾಗೂ ಸುಮಾರು ಒಂದು ಲಕ್ಷ ಮಂದಿ ಆಧಾರ್‌ಗೆ ನೋಂದಣಿಯಾಗುತ್ತಿರುತ್ತಾರೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News