ಬಾಂಗ್ಲಾ: ಪ್ರತಿಪಕ್ಷ ನಾಯಕಿ ಖಾಲಿದಾರ ಎಡಗೈ ಊನ

Update: 2018-10-09 18:31 GMT

ಢಾಕಾ, ಅ. 9: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಬಾಂಗ್ಲಾದೇಶದ ಪ್ರತಿಪಕ್ಷ ನಾಯಕಿ ಖಾಲಿದಾ ಝಿಯಾರ ಎಡಗೈ ನಿತ್ರಾಣವಾಗಿದ್ದು, ಅವರಿಗೆ ಇನ್ನು ಅದನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಅವರ ವೈದ್ಯರು ಮಂಗಳವಾರ ಹೇಳಿದ್ದಾರೆ.

73 ವರ್ಷದ ಝಿಯಾರನ್ನು 19ನೇ ಶತಮಾನದ ಜೈಲೊಂದರಿಂದ ಕಳೆದ ವಾರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಜೈಲಿನಲ್ಲಿ ಅವರೊಬ್ಬರೇ ಕೈದಿಯಾಗಿದ್ದರು.

ಅವರನ್ನು ಫೆಬ್ರವರಿ ತಿಂಗಳಲ್ಲಿ ಜೈಲಿಗೆ ಹಾಕಲಾಗಿತ್ತು. ಇತರ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರ ವಿಚಾರಣೆಯನ್ನು ಜೈಲಿನ ವಿಶೇಷ ಕೋಣೆಯೊಂದರಲ್ಲಿ ನಡೆಸಲಾಗುತ್ತಿತ್ತು.

‘‘ದೀರ್ಘಾವಧಿಯ ಸಂಧಿವಾತದಿಂದಾಗಿ ಅವರ ಎಡಗೈ ಊನಗೊಂಡಿದೆ. ಇನ್ನು ಅವರಿಗೆ ಎಡಗೈ ಬಳಸಲು ಸಾಧ್ಯವಿಲ್ಲ’’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ಝಿಯಾ 1991ರಿಂದ 96 ಮತ್ತು 2001ರಿಂದ 2006ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News