ತಮಿಳುನಾಡಿನ ಕ್ವಾ.ಫೈನಲ್ ಕನಸು ಭಗ್ನಗೊಳಿಸಿದ ಹರ್ಯಾಣ

Update: 2018-10-09 18:51 GMT

ಚೆನ್ನೈ, ಅ.9: ವಿಜಯ್ ಹಝಾರೆ ಟ್ರೋಫಿಯಲ್ಲಿ ಮಂಗಳವಾರ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಆತಿಥೇಯ ತಮಿಳುನಾಡು ತಂಡವನ್ನು 77 ರನ್‌ಗಳಿಂದ ಮಣಿಸಿದ ಹರ್ಯಾಣ ತಂಡ ಕ್ವಾರ್ಟರ್ ಫೈನಲ್‌ಗೆ ತಲುಪುವ ಕನಸನ್ನು ಭಗ್ನಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದ ತಮಿಳುನಾಡು ನಿರಂತರವಾಗಿ ವಿಕೆಟ್ ಕಳೆದುಕೊಂಡು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಲಷ್ಟೇ ಶಕ್ತವಾಯಿತು. ತಮಿಳುನಾಡು ಪರ ನಾಯಕ ವಿಜಯ್ ಶಂಕರ್(44) ಹಾಗೂ ಬಿ.ಅನಿರುದ್ಧ ಸೀತಾರಾಮ್(33) ಎರಡಂಕೆಯ ಸ್ಕೋರ್ ಗಳಿಸಿದರು.

ಟೂರ್ನಿಯಲ್ಲಿ 5 ಗೆಲುವು, ನಾಲ್ಕರಲ್ಲಿ ಸೋತಿರುವ ತಮಿಳುನಾಡು ಒಟ್ಟು 20 ಅಂಕ ಗಳಿಸಿ ತನ್ನ ಅಭಿಯಾನ ಕೊನೆಗೊಳಿಸಿದೆ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಹರ್ಯಾಣ ಒಂದು ಹಂತದಲ್ಲಿ 35ನೇ ಓವರ್‌ನಲ್ಲಿ 159 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 151 ರನ್ ಸೇರಿಸಿದ ಹಿಮಾಂಶು ರಾಣಾ(ಔಟಾಗದೆ 89,76 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ರಾಹುಲ್ ಟೆವಾಟಿಯಾ(ಔಟಾಗದೆ 91, 59 ಎಸೆತ, 8 ಬೌಂಡರಿ, 5 ಸಿಕ್ಸರ್)ತಂಡ ಉತ್ತಮ ಸ್ಕೋರ್ ಗಳಿಸಲು ನೆರವಾದರು.

8 ಪಂದ್ಯಗಳಲ್ಲಿ 28 ಅಂಕ ಕಲೆ ಹಾಕಿರುವ ಜಾರ್ಖಂಡ್ ಹಾಗೂ ಹರ್ಯಾಣ ಕ್ವಾರ್ಟರ್ ಫೈನಲ್ ತಲುಪುವ ರೇಸ್‌ನಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News