ಗರ್ಭಪಾತವು ಮಾಫಿಯಾ ಮಾದರಿಯ ಹತ್ಯೆ: ಪೋಪ್

Update: 2018-10-10 17:35 GMT

ವ್ಯಾಟಿಕನ್ ಸಿಟಿ, ಅ. 10: ಗರ್ಭಪಾತವು ಮಾಫಿಯಾ ಮಾದರಿಯ ಹತ್ಯೆಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ಬುಧವಾರ ಹೇಳಿದ್ದಾರೆ.

ಒಂದು ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಮಾನವ ಜೀವವೊಂದನ್ನು ತೆಗೆಯಲು ಹಂತಕನನ್ನು ನೇಮಿಸುವುದಕ್ಕೆ ಇದು ಸಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜನರನ್ನು ಕೊಲ್ಲಬಾರದು ಎಂಬುದಾಗಿ ಬೋಧಿಸುವ ಬೈಬಲ್‌ನ ಬೋಧನೆಗೆ ಮೀಸಲಾದ ಧಾರ್ಮಿಕ ಪ್ರವಚನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

 ಇದನ್ನು ಗರ್ಭಪಾತ ವಿರುದ್ಧದ ಅವರ ಈವರೆಗಿನ ಹೇಳಿಕೆಗಳಲ್ಲೇ ಅತ್ಯಂತ ಶಕ್ತಿಶಾಲಿ ಎಂಬುದಾಗಿ ಭಾವಿಸಲಾಗಿದೆ.

ಇತರ ಹಕ್ಕುಗಳನ್ನು ರಕ್ಷಿಸುವ ಕ್ರಮವಾಗಿ ಕೆಲವರು ಗರ್ಭಪಾತವನ್ನು ಸಮರ್ಥಿಸುತ್ತಾರೆ ಎಂದು ಫ್ರಾನ್ಸಿಸ್ ಹೇಳಿದರು. ಆದರೆ, ‘‘ಅರಳುತ್ತಿರುವ ಮುಗ್ಧ ಹಾಗೂ ಅಸಹಾಯಕ ಜೀವವೊಂದನ್ನು ಹತ್ತಿಕ್ಕುವ ಕೃತ್ಯವು ಹೇಗೆ ಪರಿಹಾರ, ನಾಗರಿಕ ಅಥವಾ ಮಾನವೀಯವಾಗಿರುತ್ತದೆ’’ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News