ಶಾಂಘೈ ಓಪನ್: ಮಾರ್ಕೊ ವಿರುದ್ಧ ಸೇಡು ತೀರಿಸಿಕೊಂಡ ಜೊಕೊವಿಕ್

Update: 2018-10-11 18:52 GMT

ಶಾಂಘೈ,ಅ.11: ಇಲ್ಲಿ ನಡೆಯುತ್ತಿರುವ ಶಾಂಘೈ ಓಪನ್ ಟೆನಿಸ್ ಟೂರ್ನಿಯಲ್ಲಿ ಇಟಲಿಯ ಮಾರ್ಕೊ ಸೆಚಿನಾಟೊರನ್ನು 6-4, 6-0 ಅಂತರದಿಂದ ಮಣಿಸುವ ಮೂಲಕ ವಿಶ್ವದ ಮೂರನೇ ಶ್ರೆಯಾಂಕಿತ ಆಟಗಾರ ನೊವಾಕ್ ಜೊಕೊವಿಕ್ ಸೇಡು ತೀರಿಸಿಕೊಂಡಿದ್ದಾರೆ.

ಈ ವರ್ಷಾರಂಭದಲ್ಲಿ ನಡೆದ ಫ್ರೆಂಚ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್‌ರನ್ನು 72ನೇ ಶ್ರೇಯಾಂಕಿತ ಆಟಗಾರನಾಗಿದ್ದ ಮಾರ್ಕೊ ಸೆೆಚಿನಾಟೊ ಸೋಲಿಸುವ ಮೂಲಕ ಸರ್ಬಿಯಾ ಆಟಗಾರನಿಗೆ ಆಘಾತ ನೀಡಿದ್ದರು.

ಫೆಬ್ರವರಿಯಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಯ ನಂತರ ಆಡಲಿಳಿದ ಜೊಕೊವಿಕ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದರು. ಆದರೆ ತನ್ನ ಹಳೆ ಆಟಕ್ಕೆ ಮತ್ತೆ ಮರಳಿದ ಜೊಕೊವಿಕ್ ವಿಂಬಲ್ಡನ್, ಸಿನ್ಸಿನಾಟಿ ಮಾಸ್ಟರ್ಸ್ ಮತ್ತು ಯುಎಸ್ ಓಪನ್ ಜಯಿಸಿದ್ದರು. ಸದ್ಯ ರಫೇಲ್ ನಡಾಲ್‌ರ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ ಅವರು ಅವರು ಒಂದು ಸಮಯದಲ್ಲಿ ಹದಿನಾಲ್ಕು ಗ್ರಾಂಡ್ ಸ್ಲಾಮ್‌ಗಳನ್ನು ಜಯಿಸಿದ್ದ ಅತ್ಯುತ್ತಮ ಫಾರ್ಮ್‌ಗೆ ನಾನು ಮತ್ತೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ. ಕೆಚಿನಾಟೊರನ್ನು ಮಣಿಸುವ ಮೂಲಕ ಜೊಕೊವಿಕ್ ಶಾಂೈ ಓಪನ್‌ನ ಕ್ವಾರ್ಟರ್ ಫೈನಲ್ ತಲುಪಿದ್ದು. ಮುಂದಿನ ಪಂದ್ಯದ ಅವರ ಎದುರಾಳಿಯ ನಿರ್ಧಾರವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News