ಯೂತ್ ಒಲಿಂಪಿಕ್ಸ್: ಲಕ್ಷ ಸೇನ್ ಗೆ ಬೆಳ್ಳಿ

Update: 2018-10-13 05:26 GMT

ಬ್ಯುನಸ್ ಐರಿಸ್, ಅ.13: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ಯೂತ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದಾರೆ.

 ಫೈನಲ್‌ನಲ್ಲಿ ಸೇನ್ ಅವರು ಚೀನಾದ ಲಿ ಶಿಫೆಂಗ್ ವಿರುದ್ಧ 15-21, 19-21 ಅಂತರದಲ್ಲಿ ಸೋತು ಬೆಳ್ಳಿ ಪಡೆದರು.42 ನಿಮಿಷಗಳಲ್ಲಿ ಸೆಮಿಫೈನಲ್ ಪಂದ್ಯ ಮುಕ್ತಾಯಗೊಂಡಿತು.

 ಸೆಮಿಫೈನಲ್ ಪಂದ್ಯದಲ್ಲಿ ಸೇನ್ ಅವರು ಜಪಾನ್‌ನ ಕೊಡಾಯ್ ನಾರಾವೊಕಾ ವಿರುದ್ಧ 14-21, 21-15, 24-22 ಅಂತರದಲ್ಲಿ ಜಯ ಗಳಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದರು.

  ಸೇನ್ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ

2010ರಲ್ಲಿ ಸಿಂಗಾಪುರದಲ್ಲಿ ನಡೆದ ಮೊದಲ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಣಯ್ ಕುಮಾರ್ ಬೆಳ್ಳಿ ಗೆದ್ದುಕೊಂಡಿದ್ದರು.

,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News